ಬೆಳಗಾವಿ: ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶನಿವಾರ ಜಿಲ್ಲೆಯ ಅಥಣಿ ಸಮೀಪದ ಹಲ್ಯಾಳ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ನಾಲ್ವರು ಸಹೋದರರನ್ನು ಕಳೆದುಕೊಂಡ ಬನಸೋಡೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಮ್ಮ ಸ್ವಂತ ಎರಡು ಲಕ್ಷ ರೂಪಾಯಿಗಳನ್ನು ಮೃತರ ಕುಟುಂಬದ ಸದಸ್ಯರಿಗೆ ಸವದಿಯವರು ನೀಡಿ ಸಾಂತ್ವನ ಹೇಳಿದ್ದು ಗಮನ ಸೆಳೆಯಿತು.
ಇತ್ತೀಚೆಗೆ ಕೃಷ್ಣಾನದಿಯಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ಬನಸೋಡೆ ಕುಟುಂಬದ ನಾಲ್ವರು ಸಹೋದರರು ಪ್ರಾಣ ಕಳೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸವದಿ ಅವರು ಮೃತರ ಮನೆಗೆ ಭೇಟಿ ನೀಡಿದ್ದರು.
*****