👨🍼ಮಣ್ಣು ಮಾಡಿ ಬಿಟ್ಟೆ ನಿನ್ನ🤰🤰
ನಿನ್ನ ನೆನಪಿನ ಕಾಣಿಕೆ ಎಂದು
ಅದೆಂಥಾ ಖುಷಿ ಖುಷಿಯಲಿ ನಾನು ಸಾವಿರ ಕನಸು ಕಟ್ಟಿಕೊಂಡಿದ್ದೆ ಮನದಲ್ಲಿ ,
ಆದರೆ ಇಂದು ನನ್ನ ಕಣ್ಣುಗಳು ತೇವವಾಗಿ ಕಂಬನಿಯ ನದಿಯಲಿ ಆ ನಿನ್ನ ನೆನಪುಗಳೆ ಹೆಣವಾಗಿ ತೆಲುತಿವೆ,
ಪ್ರೀತಿ ಮದುವೆಯ ನೆಪಮಾಡಿ
ಮನಸ್ಸು ಮನಸ್ಸುಗಳಿಗೆ ಉಲ್ಲಾಸ ನೀಡಿ ಅವನು ಕೊಟ್ಟ ಉಡುಗೊರೆ ಎಂಥಾ ಬಿಸಿ ಎಂದರೆ, ರಕ್ತ ರಾತ್ರಿಯ ಹಾಗೆ
ತೊಡೆಯುದ್ದಕ್ಕು ಹರಿದರು ಕೆಂಪು ನೆತ್ತರು,
ಅವಳಿನ್ನು ಎನ್ನ ಗರ್ಭದಲ್ಲಿ ಗಟ್ಟಿ ಜೀವಕಣಗಳಂತೆ ತಂಪಾಗಿ ತೇಲುತ್ತಿದ್ದಾಳೆ,
ಹೊಟ್ಟೆ ಮುರಿದರು ಕಣ್ಣೀರು ಸುರಿದು
ಉಂಡ ಹೊಟ್ಟೆಯಲಿ
ಮಾಂಸಮುದ್ದೆ ಮುಟಿಗೆ ಮಾಡಿ
ಬಿದ್ದರು,
ಕರಗದ ಅವನ ಕಲ್ಲು ಮನಸ್ಸು ಕಂಡು
ಇಂದು ಅವಳ ಪ್ರೀತಿ ನೇಣಿಗೆ ಶರಣಾಗಿದ್ದಾಳೆ,
ಕೊರಳಿಗೆ ಬೀಳಬೆಕಿದ್ದ ಮಾಂಗಲ್ಯದಾರ
ಇಂದು ಉರುಳಾದಾಗ ನೆನದು ಹೇಳಿತು
ಹೇ ಪಿಚ್ವು ಮನಸ್ಸಿನ ಹುಚ್ಚು ಕನಸೆ
ನಿನ್ನತನವ ಅರಿಯದೆ ನಿನ್ನನ್ನ ನೋಯಿಸಿದವರ ಕಂಡು
ನರಳುವುದ ನಿಲ್ಲಿಸು ನಗುವುದನ್ನು ಕಲಿಸು ,
ನಿನ್ನ ಗರ್ಭದೊಳಗೆ ಮಣ್ಣಾದ ಕುಡಿಯ ಕಂಡು ಮರುಗದಿರು,
ಹೊರ ಜಗತ್ತಿಗೆ ಬಂದು ನಿನ್ನಂತೆ ಕೊರಗದಿರಲಿ ಎಂದು ಮಣ್ಣಾದುದನು ಕಂಡು ಹೆಮ್ಮೆ ಪಡು,
ಅದೊಂದು ಕೆಟ್ಟ ಗಳಿಗೆಯೆಂದು ಮರೆತು ಬಿಡು,
ಚಕ್ರ ತಿರುಗುತ್ತಲೆ ಇರುತ್ತದೆ ಅವನಿಗೊಮ್ಮೆ ಪರಿಸ್ಥಿತಿ ಅರ್ಥವಾಗುತ್ತದೆ ಆಗಲಿ ಬಿಡು
-ಅಂಜಲಿ ಬೆಳಗಲ್✍️
ಹೊಸಪೇಟೆ
*****
ಕು.ಅಂಜಲಿ ಬೆಳಗಲ್, ಹೊಸಪೇಟೆ