ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರಾಗಿ ಮಂಜಮ್ಮ ಜೋಗತಿ, ಉಪಾದ್ಯಕ್ಷರಾಗಿ ಪುರುಷೋತ್ತಮ‌ ಹಂದ್ಯಾಳ್ ಆಯ್ಕೆ:ಹರ್ಷ

 

ಪದ್ಮಶ್ರೀ ಬಿ.ಮಂಜಮ್ಮ ಜೋಗತಿ

ಪುರುಷೋತ್ತಮ ಜಿ ಹಂದ್ಯಾಳ್

ಬಸವರಾಜ ಬಲಕುಂದಿ

ಬಳ್ಳಾರಿ, ಜು. 5: ಈಚೆಗೆ ಬೀದರ್ ನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು 17 ಪದಾಧಿಕಾರಿಗಳಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂವರು ಕಲಾವಿದರು ಪದಾಧಿಕಾರಿಗಳು ಆಯ್ಕೆಯಾಗಿರುವುದು ಅವಳಿ ಜಿಲ್ಲೆಯಲ್ಲಿ ಹರ್ಷ ತಂದಿದೆ.
ಒಕ್ಕೂಟದ ಗೌರವಾಧ್ಯಕ್ಷರಾಗಿ ಕರ್ನಾಟಕ‌ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಅವರು, ಉಪಾಧ್ಯಕ್ಷರಾಗಿ ರಂಗ‌ಕಲಾವಿದ ಪುರುಷೋತ್ತಮ‌ ಹಂದ್ಯಾಳ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಬೀದರ್ ನ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿಯಾಗಿ ಯಾದಗಿರಿಯ ಪ್ರಕಾಶ್ ಅಂಗಡಿ, ಕೋಶಾಧ್ಯಕ್ಷರಾಗಿ ಕಲಬುರಗಿಯ ಎಸ್. ಬಿ. ಹರಿಕೃಷ್ಣ, ಉಪಾಧ್ಯಕ್ಷರಾಗಿ ರಾಯಚೂರಿನ ಡಿಂಗ್ರಿ ನರೇಶ್, ಕಲಬುರಗಿಯ ಸುಜಾತಾ ಜಂಗಮಶೆಟ್ಟಿ, ಕೊಪ್ಪಳದ ಶರಣಪ್ಪ ವಡಿಗೇರಾ, ಬಳ್ಳಾರಿಯ ಪುರುಷೋತ್ತಮ ಜಿ ಹಂದ್ಯಾಳ್ ಅವರು, ಸಹ ಜಾರ್ಯದರ್ಶಿಗಳಾಗಿ ಬೀದರಿನ ರೇಖಾ ಅಪ್ಪಾರಾವ್ ಸೌದಿ, ಚಿತ್ತಾಪುರದ ನಾಗಯ್ಯಸ್ವಾಮಿ, ರಾಯಚೂರಿನ ಅಂಬ್ರೇಶ ಹಸಮಕಲ್, ಕಲಬುರಗಿಯ ವಿಶ್ವನಾಥ್ ತೊಟ್ನಳ್ಳಿ ಆಯ್ಕೆಯಾಗಿದ್ದರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೊಪ್ಪಳದ ಜೀವನಸಾಬ್ ಬಿನ್ನಾಳ್, ಬೀದರಿನ ಲಲಿತಾ ಪವಾರ್, ಸುನೀಲ್‌ಕಡ್ಲೆ, ಶಿವಪ್ಪ ಹೆಬ್ಬಾಳ್ ಯಾದಗಿರಿ, ಸಿರುಗುಪ್ಪದ ಬಸವರಾಜ ಬಲಕುಂದಿ ಸೇರಿದಂತೆ ಏಳು ಜಿಲ್ಲೆಗಳಿಂದ ಒಟ್ಟು ಹದಿನೇಳು ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಉಪಾಧ್ಯಕ್ಷ ಹಿರಿಯ ರಂಗಕಲಾವಿದ ಪುರುಷೋತ್ತಮ್ ಹಂದ್ಯಾಳ್ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.
ವಿಶೇಷವೆಂದರೆ ಒಕ್ಕೂಟದಲ್ಲಿ ರಂಗಭೂಮಿ, ಜನಪದ,ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕಲಾವಿದರು ಆಯ್ಕೆಯಾಗಿದ್ದಾರೆ.
*****