ಅನುದಿನ ಕವನ-೧೮೬, ಕವಿ: ಗಾನಾಸುಮ ಪಟ್ಟಸೋಮನಹಳ್ಳಿ, ಕವನದ ಶೀರ್ಷಿಕೆ: ಅಪ್ಪ…

ಅಪ್ಪ…

‘ಅಪ್ಪ’
ಎಂಬ
ಅನಂತವೇ ಹೀಗೆ..!
ಮನೆಯ
ಮೇಟಿಯಾಗುತಾನೆ.
ಅಮ್ಮನ
ಪಾಲಿನ ಬೇಕು- ಬೇಡಗಳ
ಅಕ್ಷಯಪತಿಯಾಗುತಾನೆ
ಮಕ್ಕಳ ಪಾಲಿನ
ಬೇಲಿಯಾಗುತಾನೆ.
ರಕ್ಷಣೆಗೆ ಬಂದರೆ
ಮನೆಯ ಹೆಬ್ಬಾಗಿಲಾಗುತಾನೆ
ಆಕಾಶದ ಹೊದಿಕೆಯಂತೆ
ಮನೆಯ ಮೇಲಣ
ಸೂರಾಗುತಾನೆ..
ಎಲ್ಲರ ಆಸರೆಯ
ನೇಸರನಾಗುತಾನೆ.
ಬೇಸರಗೊಳ್ಳದ ಜನಕನಮನ
ಕೊನೆಗೆ ಅಮ್ಮನ
ಹೆಸರಿಗೆ ಎಲ್ಲವನ್ನ ತ್ಯಾಗಿಸಿ
ಕೊನೆಗೊಮ್ಮೆ
ಹೆಸರಿಲ್ಲದ ಪಯಣ ಮುಗಿಸುತಾನೆ..
ಇದೇ..
ಅಪ್ಪನೆಂಬ ತ್ಯಾಗಜೀವಿಯ
ಬಿಡುವಿಲ್ಲದ..ಬದುಕು…!

-ಗಾನಾಸುಮಾ ಪಟ್ಟಸೋಮನಹಳ್ಳಿ
*****