ಅನುದಿನ ಕವನ-೧೯೪, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಸಮಾನತೆ

 

🖕ಶೋಭ ಮಲ್ಕಿಒಡೆಯರ್

ಸಮಾನತೆ

ಹಣತೆ ಮಣ್ಣಿನದ್ದಾಗಿರಲಿ
ಚಿನ್ನದ್ದಾಗಿರಲಿ
ಬೆಳಗುವ ಬೆಳಕು ಮಾತ್ರ ಒಂದೇ //

ಜಾತಿ ಯಾವುದೇ ಆಗಿರಲಿ
ಭಾಷೆ ಬೇರೆಯೇ ಇರಲಿ
ದೇಹದಲ್ಲಿ ಹರಿಯುವ ರಕ್ತ ಒಂದೇ //

ದೇವನೊಬ್ಬನಿರಲಿ
ನಾಮಗಳು ಹಲವಿರಲಿ
ಸಕಲರ ಭಕುತಿಯೂ ಒಂದೇ //

ಮೇರು ಸಿರಿತನವಿರಲಿ
ಬಡವ ಬಡತನದಲ್ಲೇ ಇರಲಿ
ತುಂಬುವ ತುತ್ತಿನ ಚೀಲ ಯಾರಿಗೂ ಒಂದೇ //

ಸ್ಪುರದ್ರೂಪಿಯಾಗಿರಲಿ
ಕುರೂಪಿಯೇ ಆಗಿರಲಿ
ಪ್ರೀತಿಸುವ ಹೃದಯಗಳು ಎಂದಿಗೂ ಒಂದೇ //

ಯಾವ ಜನಾಂಗದವರಿರಲಿ
ಯಾವ ಪಂಗಡದವರೇ ಆಗಿರಲಿ
ಎಲ್ಲರಿಗೂ ನೆಲ ಒಂದೆ ಜಲ ಒಂದೇ //

-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****