ಹೊಸಪೇಟೆ(ವಿಜಯನಗರ),ಜು.16: 2020-21ನೇ ಸಾಲಿನ ಡಿಎಂಎಫ್ ಯೋಜನೆಯಡಿಯಲ್ಲಿ ಮಂಜೂರಾದ 90 ಲಕ್ಷ ವೆಚ್ಚದಲ್ಲಿ ನಗರದ ಉದ್ಯೋಗ ಪೆಟ್ರೋಲ್ ಬಂಕ್‍ನಿಂದ ಮೇನ್ ಬಜಾರ್ ಮುಖಾಂತರ ಬಳ್ಳಾರಿ ಸರ್ಕಲ್‍ವರೆಗಿನ ರಸ್ತೆ ಅಭಿವೃದ್ಧಿ ಹಾಗೂ 75 ಲಕ್ಷ ವೆಚ್ಚದ ಹೊಸಪೇಟೆ ನಗರದ ರಾಮ್‍ಲೀ ಸ್ವಾಮಿ ಮಜೀದ್ ರಸ್ತೆಯಿಂದ ವಯಾ ಚಪ್ಪರದಹಳ್ಳಿ ಮುಖಾಂತರ 100 ಹಾಸಿಗೆ ಆಸ್ಪತ್ರೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಧರ್ಮೇಂದ್ರಸಿಂಗ್, ಹುಡಾ ಅಧ್ಯಕ್ಷ ಅಶೋಕ್ ಜಿರೇ, ನಗರಸಭೆ ಆಯುಕ್ತ ಮನ್ಸೂರ್ ಅಲಿ, ಹುಡಾ ಮಾಜಿ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಸಂದೀಪ್‍ಸಿಂಗ್, ಸಮಾಜ ಸೇವಕರಾದ ಟಿಂಕರ್ ರಫೀಕ್, ಕಲಂದರ್ ಮತ್ತು ಇತರರು ಇದ್ದರು.
*****