ಅನುದಿನ ಕವನ-೧೯೬, ಕವಿ:ಪ್ರಕಾಶ್ ಮಲ್ಕಿಒಡೆಯರ್ ಹೂವಿನ ಹಡಗಲಿ, ಕವನದ ಶೀರ್ಷಿಕೆ:ಆಟಕೆ ಒಲ್ಲೆ ನಾನಮ್ಮ (ಶಿಶು ಕಾವ್ಯ)

ಆಟಕೆ ಒಲ್ಲೆ ನಾನಮ್ಮ  (ಶಿಶು ಕಾವ್ಯ)👇

ಆಡಲು ಒಲ್ಲೆ ನಾನಂತೂ
ಕೇಳಲು ಒಲ್ಲೆ ನೀನಂತೂ
ಹೇಳುವೆ ನಾನು ಕೇಳಮ್ಮ
ಆಟದಿ ನಡೆವ ಒಳಗುಟ್ಟು !

ಪಟಾಕಿ ತರುವ ನಾನಂತೆ
ಹಚ್ಚುವ ರಾಮ ತಾನಂತೆ
ಕೊಡೋಲ್ಲ ಎಂದರೆ ಹೊಡೆಯುವನು
ಸುಮ್ನೆ ತರಲೆ ಮಾಡುವನು !

ಆss ರಾಜು ಇದ್ದಾನೆ
ಇದ್ದಂತೆ ತಾನು ಮರಿಯಾನೆ
ಓಡಲಾಗದೆ ನಡೆದೆ ತಾನು ಬರುತಾನೆ
ಆದರೂ ಓಟದಿ ತಾನೇ ಫಸ್ಟಂತೆ
ನಾನೇನಾದರೂ ಗೆದ್ದರೆ ಬೆನ್ನಿಗೆ ಗುದ್ದು ಬಿದ್ದಂತೆ !

ಕ್ರಿಕೆಟ್ ಎಂದರೆ ಬಲು ಇಷ್ಟ
ಗೆಲ್ಲುವುದೈತಿ ಬಲು ಕಷ್ಟ
ಚೆಂಡಿನ ಬದಲು ಉಂಡಿಯನೆಸೆದು
ಆಟವ ಕೆಡಿಸುವ ಆss ಕೃಷ್ಣ !

ಆಟಕೆ ಒಲ್ಲೆ ನಾನಮ್ಮ
ಊಟಕ್ಕೆ ಬಡಿಸು ಬಾರಮ್ಮ
ತಿಂದೂ – ತಿಂದೂ ಕೈ ತುತ್ತು
ಬೆಳೆಸಿಕೊಳ್ಳುವೆ ತಾಕತ್ತು !

ಬೆಳೆದು ದೊಡ್ಡವನಾಗುವೆ
ಮೋಸದ ಆಟವ ತಡೆಯುವೆ
ಆಟದಿ ಗೆಳೆತನ ಬೆಳೆಸುವೆನು
ಪ್ರೇಮದಿ ದೇಶವಾ ಕಟ್ಟುವೆನು

-ಪ್ರಕಾಶ್ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****