ಬಳ್ಳಾರಿ ವೀ.ವಿ ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿ ನೂತನ ಅದ್ಕಕ್ಷರಾಗಿ ಏಳುಬೆಂಚಿ ರಾಜಶೇಖರ ಅಧಿಕಾರ ಸ್ವೀಕಾರ

ಬಳ್ಳಾರಿ, ಜು.17: ನಗರದ ವೀ.ವಿ ಸಂಘದ ಸ್ವತಂತ್ರ ಪ.ಪೂ.ಕಾಲೇಜಿನ ನೂತನ ಆಡಳಿತ ಮಂಡಳಿಯ ಅದ್ಯಕ್ಷರಾಗಿ ಏಳುಬೆಂಚಿ ರಾಜಶೇಖರ ಅವರು ಅಧಿಕಾರ ಸ್ವೀಕರಿಸಿದರು.
ಕಾಲೇಜಿನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ನಿಕಟಪೂರ್ವ ಆಡಳಿತ ಮಂಡಳಿಯ ಅದ್ಯಕ್ಷ ಡಾ.ಎಸ್. ಎಫ್. ಗಡ್ಡಿಯವರು ನೂತನ ಅದ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ವೀ.ವಿ ಸಂಘದ ಕಾರ್ಯದರ್ಶಿ ಬಿ.ವಿ. ಬಸವರಾಜ್ ಅವರು ಈ ಸಂದರ್ಭ ಉಪಸ್ಥಿತರಿದ್ದು ಶುಭಹಾರೈಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬೈಲವದ್ದಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀ.ವಿ. ಸಂಘದ ಅಧ್ಯಕ್ಷರಾದ ಹೆಚ್.ಎಂ. ಗುರುಸಿದ್ದಸ್ವಾಮಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಖಾಜ ಬಂದೇ ನವಾಜ್ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಹೆಚ್.ಎಂ. ರಾಜಶೇಖರ್ ಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀವಿ ಸಂಘದ ಕಾರ್ಯಕಾರಿ ಆಡಳಿತ ಮಂಡಳಿಯ ಸಹಕಾರ್ಯದರ್ಶಿ ದರೂರು ಶಾಂತನಗೌಡರುˌ ಸದಸ್ಯರಾದ ಎಸ್. ಮಲ್ಲನಗೌಡˌ ಶ್ರೀಮತಿ ಕುಪ್ಪಗಲ್ ಗಿರಿಜ,  ಶ್ರೀಮತಿ ಎಂ.ಕ್ಯಾತ್ಯಾಯನಿ ಮರಿದೇವಯ್ಯ ˌ ಹೆಚ್.ಎಂ. ಕಿರಣ ಕುಮಾರ್ˌ ಪಲ್ಲೇದ ದೊಡ್ಡಪ್ಪˌ, ಸಿದ್ದರಾಮ ಕಲ್ಮಠ್ˌ ಕೆರನಳ್ಳಿ ಚಂದ್ರಶೇಖರ್ˌ ಡಾ.ಎಸ್.ಬಿ. ರಾಜಶೇಖರ ಅಸುಂಡಿ ನಾಗರಾಜ ಗೌಡ, ಯಾಳ್ಪಿ ಮೇಟಿ ಪಂಪನಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಸನ್ಮಾನಿಸಿಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮಂಜುನಾಥ ಸ್ವಾಗತಿಸಿದರು.ˌ ಕನ್ನಡ ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
*****