ಡಾ.ಪ್ರವೀಣ್ ಕುಮಾರ್, ಐಪಿಎಸ್
ಗುರುಕುಲಂ(ತೆಲಂಗಾಣ): ತೆಲಂಗಾಣ ಸಮಾಜ ಕಲ್ಯಾಣ ಇಲಾಖೆಯ ವಸತಿ (ಸ್ವರೋಸ್) ಶಾಲೆಗಳ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾಗಿದೆ. ಪ್ರವೇಶ ಪರೀಕ್ಷೆಗೆ ಸಾರ್ವಜನಿಕರು ಮುಗಿಬಿದ್ದಿರುವುದೇ ಸ್ವರೋಸ್ ಶಾಲೆಗಳ ಬೇಡಿಕೆಗೆ ಸಾಕ್ಷಿ.
ಹೌದು..ಮಲ್ಲಕಪಲ್ಲಿ ಜಿಲ್ಲೆಯ ಗುರುಕುಲಂ ನಲ್ಲಿ ಜರುಗಿದ 5 ನೇ ತರಗತಿ ಪ್ರವೇಶಕ್ಕಾಗಿ ಭಾನುವಾರ ಜರುಗಿದ ಪ್ರವೇಶ ಪರೀಕ್ಷೆ ಬರೆಯಲು ಮಕ್ಕಳ ಜೊತೆ ಸಾವಿರಾರು ಸಂಖ್ಯೆಯಲ್ಲಿ ಪೋಷಕರು ಬಂದ ದೃಶ್ಯ ನೋಡುವುದೇ ಒಂದು ಹೆಮ್ಮೆ. ಇದೊಂದು ಐತಿಹಾಸಿಕ ಪ್ರಕ್ರಿಯೆ ಎನ್ನಬಹುದು.
ತೆಲಂಗಾಣದಲ್ಲಿ ಸಾಮಾಜಿಕ ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಐಪಿಎಸ್ ಅಧಿಕಾರಿಯಾಗಿರುವ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಜಾರಿಗೆ ತಂದಿರುವ ಪರಿಣಾಮದಿಂದ ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ನೂಕು ನುಗ್ಗಲು ಉಂಟಾಗಿದೆ.
ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಅನುಯಾಯಿಯಾಗಿರುವ ಡಾ. ಪ್ರವೀಣ್ ಕುಮಾರ್ ಅವರು ಭಾರತದ ಹೊಸ ಶೈಕ್ಷಣಿಕ ಮತ್ತು ಐತಿಹಾಸಿಕ ಬದಲಾವಣೆಯನ್ನು ವಿಶ್ವ ಇತಿಹಾಸದ ಪುಟಗಳಲ್ಲಿ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
(ಚಿತ್ರ-ಮಾಹಿತಿ: ಬಾಲಾಜಿ ಎಂ ಕಾಂಬ್ಳೆ)
*****