ಹಾವೇರಿ, ಜು.23: ದೆಹಲಿಯ ಸತ್ಯ ಗ್ಲೋಬಲ್ ಸಂಸ್ಥೆಯ ಭಾಗವಾದ ಕ್ರಿಯೇಷನ್ಸ್ ಆಯೋಜಿಸಿದ್ದ ಅಂತರಾಷ್ಟ್ರೀಯ ಆನ್ ಲೈನ್ ಕಲಾ ಸ್ಪರ್ಧೆಯಲ್ಲಿ ಹಾವೇರಿಯ ಇಬ್ಬರು ವಿದ್ಯಾರ್ಥಿನಿಯರು ಎಕ್ಸಲನ್ಸ್ ಮತ್ತು ಗೋಲ್ಡ್ ಅವಾರ್ಡ್ ಗೆ ಭಾಜನರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಗರದ ಸೇಂಟ್ ಆನ್ಸ್ ,ಐಸಿಎಸ್ ಸಿ ಶಾಲೆಯ 7 ನೇತರಗತಿ ವಿದ್ಯಾರ್ಥಿನಿ ಲಿಖಿತ.ಎಂ “ಎಕ್ಸಲನ್ಸ್ ಅವಾರ್ಡ್” ಗೆ ಹಾಗೂ 4 ನೇತರಗತಿ ವಿದ್ಯಾರ್ಥಿನಿ ಜೀವಿಕ.ಎಂ “ಗೋಲ್ಡ್ ಅವಾರ್ಡ್” ಪಡೆದುಕೊಂಡಿದ್ದಾರೆ.
ಖ್ಯಾತ ಚಿತ್ರಕಾರ ನಾಮದೇವ ಕಾಗದಗಾರ ಅವರು ಈ ವಿದ್ಯಾರ್ಥಿನಿಗಳಿಗೆ ಮಾರ್ಗದರ್ಶನ ನೀಡಿದ್ದರು.. ಹಾವೇರಿಯ ಮಂಜುನಾಥ ಹಾಗೂ ಅನಿತ ದಂಪತಿಗಳ ಮಕ್ಕಳಾದ ಈ ಇಬ್ಬರು ವಿದ್ಯಾರ್ಥಿನಿಯರಿಗೆ ತಲಾ ಮೂರು ಸಾವಿರದ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಿರುತ್ತಾರೆ.. ಚಿತ್ರ ರಚಿಸಲು Colour of Happiness ಎಂಬ ಥೀಮ್ ಕೊಟ್ಟಿದ್ದರು. ಈ ಸ್ಪರ್ಧೆಯಲ್ಲಿ ವಿಶ್ವದ 10 ಕ್ಕೂ ಹೆಚ್ಚು ವಿವಿಧ ದೇಶದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
*****