ಬೆಂಗಳೂರು, ಜು. 26: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ಸಲ್ಲಿಸಿದರು.
ರಾಜಭವನಕ್ಕೆ ತೆರಳಿದ ಬಿ ಎಸ್ ವೈ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.
ರಾಜೀನಾಮೆ ಪತ್ರ ಸ್ವೀಕರಿಸಿರುವ ರಾಜ್ಯಪಾಲರು ತಕ್ಷಣದಿಂದಲೇ ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲವನ್ನು ರದ್ದುಪಡಿಸಿ, ಪರ್ಯಾಯ ವ್ಯವಸ್ಥೆ ಆಗುವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಿಎಸ್ ವೈ ಅವರಿಗೆ ಸೂಚಿಸಿದ್ದಾರೆ.
*****