ರಾಜಿನಾಮೆಗಿಂತ ಸಾವು ಸಣ್ಣದಾಯಿತೆ? -ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ರಾಜಿನಾಮೆಗಿಂತ ಸಾವು ಸಣ್ಣದಾಯಿತೆ?          -ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ನಿನ್ನೆ (ಜು.26)ನಡೆದ ಎರಡು ಪ್ರಮುಖ ಘಟನೆಗಳು:

1. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ
2. ಹಿರಿಯ ನಟಿ ಜಯಂತಿ ಕೊನೆಯುಸಿರು

ಹತ್ತಾರು ಕನ್ನಡ ಸುದ್ದಿ ವಾಹಿನಿಗಳಲ್ಲಿ ಹಾಗೂ ಇಂದಿನ ಹಲವು ಪತ್ರಿಕೆಗಳ ಮುಖಪುಟದಲ್ಲಿ ಬಹುತೇಕ ಯಡಿಯೂರಪ್ಪ ಅವರ ರಾಜಿನಾಮೆಯ ಸುದ್ದಿಗಳೇ ತುಂಬಿ ತುಳುಕುತ್ತಿವೆ.

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಒಬ್ಬ ಹೆಸರಾಂತ ಹಿರಿಯ ನಟಿಯ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟವೇ ಸರಿ. ಈ ಸುದ್ದಿಗಿಂತ ಸ್ವಾರ್ಥ, ಕುಟುಂಬ ರಾಜಕೀಯ, ಭ್ರಷ್ಟ ರಾಜಕಾರಣದಲ್ಲಿ ತೊಡಗಿದ್ದ ರಾಜಕಾರಣಿಯೊಬ್ಬರ ರಾಜಿನಾಮೆಯ ಸುದ್ದಿಯನ್ನೇ ಮಾಧ್ಯಮಗಳು ವೈಭವೀಕರಿಸಿದ್ದು ದುರಂತ. (ರಾಜಿನಾಮೆಯಿಂದ ಯಾರಿಗೂ ನಷ್ಟವಿಲ್ಲ) ಈ ಮೂಲಕ (ಕೆಲವು) ಪತ್ರಿಕೆಗಳು, ಸುದ್ದಿಮಾಧ್ಯಮಗಳು ಸುದ್ದಿಯ ಮೌಲ್ಯಕ್ಕಿಂತ ಜನಪ್ರಿಯತೆ ಮತ್ತು ಜನರ ಮನಸ್ಥಿತಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದನ್ನು ಪುನಃ ಸಾಬೀತುಪಡಿಸಿವೆ.

ಸಾಧನೆಗಿಂತ ಸ್ವಾರ್ಥವನ್ನೇ ಮೆರೆಸಿದ್ದು ದೊಡ್ಡ ದುರಂತ.

-ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ ಜಿಲ್ಲೆ
9740887028