ಅನುದಿನ‌ಕವನ-೨೦೯, ಕವಿ:ಸಂಜಯ್ ಹೊಯ್ಸಳ, ಕವನದ ಶೀರ್ಷಿಕೆ: ಹುಲಿ

ಪ್ರತಿ ವರ್ಷ ಜು.29 ರಂದು ವಿಶ್ವದಾದ್ಯಂತ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹುಲಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹುಲಿ ದಿನಾಚರಣೆಯ ವಿಶೇಷ. ವಿಶ್ವದ ಹುಲಿ ಸಂಖ್ಯೆಯಲ್ಲಿ ಶೇ. 70ರಷ್ಟು ಭಾರತದಲ್ಲಿವೆ. ಇದರಲ್ಲಿ 524 ಸಂಖ್ಯೆಯ ಹುಲಿಗಳೊಂದಿಗೆ ಕರ್ನಾಟಕ, ದೇಶದಲ್ಲಿ 2ನೇ ಅತಿ ಹೆಚ್ಚು ಹುಲಿಗಳಿಗೆ ನೆಲೆಯಾಗಿರುವುದು ಹೆಮ್ಮೆ ಪಡುವಂತಹುದು.
ಪರಿಸರದ ಅಪಾರ ಕಾಳಜಿ ಇರುವ ಯುವ ಕವಿ ಸಂಜಯ ಹೊಯ್ಸಳ ಅವರು ಹುಲಿಯ ಕುರಿತು ರಚಿಸಿದ ಕವಿತೆ ‘ಹುಲಿ’ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ.

ಹುಲಿ
ಕಾಡಂಚಿನ ಜನ ನಿನಗನ್ನುವರು ‘ಜಾತಿ’!
ನೀ ಕಾಡನಲೆಯುವೆ ಇಲ್ಲದೇ ಯಾವುದೇ ಭೀತಿ!
ಏಕಾಂಗಿ ಹೋರಾಟ ನಿನ್ನ ಧೈರ್ಯದ ‘ಛಾತಿ’!
ಹಲವು ಬಗೆಯಲ್ಲಿ ಮಾದರಿ ನಿನ್ನ ವ್ಯಕ್ತಿತ್ವದ ರೀತಿ!!

ಪುಣ್ಯಕೋಟಿಯ ಪ್ರಾಮಾಣಿಕತೆಗೆ ಮೆಚ್ಚಿ,
ಅದಕ್ಕೆ ಪ್ರಾಣಬಿಕ್ಷೆ ನೀಡಿ ಪ್ರಾಣತೆತ್ತ ತ್ಯಾಗಿ!
ಸತ್ತರೂ ಹುಲ್ಲುತಿನ್ನದ ಮಹಾನ್ ಸ್ವಾಭಿಮಾನಿ!
ತನ್ನ ಪ್ರದೇಶಕ್ಕೆ ಮತ್ತೊಂದು ಹುಲಿಯನ್ನು ಬಿಟ್ಟುಕೊಳ್ಳದೇ ಆವಾಸಸ್ಥಾನಕ್ಕಾಗಿ ಯುದ್ದ ಮಾಡುವ ಸಾರ್ವಭೌಮಿ!
ತನ್ನ ತೂಕದ ಐದಾರು ಪಟ್ಟು ಹೆಚ್ಚು ತೂಕದ ಪ್ರಾಣಿಯನ್ನು ಏಕಾಂಗಿಯಾಗಿ ಬೇಟೆಯಾಡಿ ಎಳೆದೊಯ್ಯುವ ಅಪ್ರತಿಮ ಬಲಶಾಲಿ ಸೇನಾನಿ!

ಬೆಕ್ಕಿನ ಜಾತಿ ಪ್ರಾಣಿಯಲ್ಲೆ ದೈತ್ಯ ಪ್ರಾಣಿಯಾಗಿ, ಆಹಾರ ಪಿರಮಿಡ್ಡಿನಲ್ಲಿ ಮೊದಲ ಸ್ಥಾನದಲ್ಲಿ ನಿಂತು ಆಗಿರುವೆ ನೀ
ಜೈವಿಕ ಸಮತೋಲನದ ನಾಯಕ.
ನಮ್ಮ ದೇವಾನುದೇವತೆಗಳ ಸಾರಥಿ,
ಧೈರ್ಯ, ಶೌರ್ಯಕ್ಕೆ ಎಂದೆಂದೂ ನಿನ್ನ ಹೆಸರೇ ಅನ್ವರ್ಥದ ಆರಥಿ!!

– ಸಂಜಯ್ ಹೊಯ್ಸಳ
*****

👆ಸಂಜಯ್ ಹೊಯ್ಸಳ