ಕವಿ-ಕವಿತೆ
ಕವಿತೆ ಇಷ್ಟವಾದರೆ
ಎದೆಯ ಮೇಲೆ ಹರವಿಕೊಳ್ಳಿ
ಇಲ್ಲವಾದರೆ ತುಳಿಯದೇ
ದಾಟಿ ಬಿಡಿ
ಕನಸುಗಳ ಬಿತ್ತುವುದಾದರೆ
ಎಡ-ಬಲ ನೋಡದೇ ಬಿತ್ತಿ
ಕೀಳುವ ಕೈ ಹೂವಾಗಿರಲಿ
ನೋವು ಹೃದಯಕ್ಕಾಗದಿರಲಿ
ಪ್ರೀತಿ ಹೆಚ್ಚಾದರೆ
ಕನಸುಗಳ ಚಿಗುರಲು ಬಿಡಿ
ದ್ವೇಷ ದಳ್ಳುರಿಯಲಿ
ಮಾನವತೆಯ ಸುಡುವುದು ಬಿಡಿ
ಎತ್ತರಕೆ ಏರುವವರನ್ನು
ಏರಲು ಬಿಡಿ
ಏರಿ, ಇಳಿಯುವವರನ್ನು
ಆದರತೆಯ ತೋರಿ
ಬೆಳೆದವರನು ಬೆಳೆಸುವುದು ಘನವಲ್ಲ;
ಬೆಳೆಯುವವರನು ಬೆಳಸುವುದು ಘನ!
ಕಾವ್ಯ ಖಡ್ಗ, ನೋವಿಗೆ ಮಿಡಿವ ಪ್ರಾಣ ಮಿತ್ರ
ಕವಿಗೆ ಕವಿ, ಕಿವಿ ಅಲ್ಲ ವೈರಿ; ತುಳಿಯದೇ ನಡಿ!
-ಡಾ.ಸದಾಶಿವ ದೊಡಮನಿ, ಇಳಕಲ್