ತಣಿಸಲಾರೆ ನಿನ್ನ ಹಸಿವು….
ನಸುಕಿನಲ್ಲೇ
`ಕಾವ್ ಕಾವ್’ಗುಟ್ಟುವ
ಓ, ನನ್ನ ಕಪ್ಪುಕಾಗೇ
ಕಡಲಬ್ಬರದ
ಏರಿಳಿತಗಳಲ್ಲಿ
ಮರೆಯಾಗಿ
ಥಟ್ಟನೆ ಕಣ್ಣೆದುರು
ನಿಲ್ಲುವ
ನೀನು – ನಾನು
ಭೇಟಿ ಆಗಿದ್ದು
ಹಸಿವು ; ನೀರಡಿಕೆಗೆ
ಮಾತ್ರ
ಹಾರಾಡಿ ಹಸಿದು
ದಣಿದ ನೀನು
ಆಕಾಶದಲಿ,
ದುಡಿದು ಬೆವರಾದ
ನಾನು ಈ
ಭೂಮಿಯಲ್ಲಿ
ಪರದೇಶಿಗಳೇ
ನಮ್ಮಿಬ್ಬರ ಹೊಟ್ಟೆಗೆ
ನಮ್ಮಿಬ್ಬರ ದಣಿವಿಗೆ
ಅನ್ನ ; ನೀರು
ಸಕಾಲಕ್ಕೆ ಸಿಗುತ್ತಿಲ್ಲ,
ನಮ್ಮದೂ
ಬದುಕೇ?
ನೀನೇ ಹೇಳು,
ಪ್ರಿಯ `ಕಾಗೆ’.
-ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ
*****