ಅನುದಿನ ಕವನ-೨೨೦, ಕವಿ: ಎ.ಎನ್. ರಮೇಶ್ ಗುಬ್ಬಿ, ಕೈಗಾ, ಕವನದ ಶೀರ್ಷಿಕೆ: ಅನುಭಾವ….

ಕವಿ ಎ.‌ಎನ್ ರಮೇಶ್ ಅವರ ಅತ್ಯಂತ ಇಷ್ಟದ ಕವಿತೆ ‘ಅನುಭಾವ’. ದಿವ್ಯಾನುಭೂತಿ ನೀಡುವ ಆಂತರ್ಯದ ಭಾವಗೀತೆ. ಅಂತರಂಗದ ಅದ್ಭುತ ಸೌಂದರ್ಯವನ್ನು, ಅನನ್ಯ ಮಾಧುರ್ಯವನ್ನು ಆಸ್ವಾಧಿಸಬೇಕೆಂದರೆ ಅಂತರ್ಮುಖಿಯಾಗಬೇಕು. ನಮ್ಮೊಳಗೆ ನಾವೇ ಮುಖಾಮುಖಿಯಾಗಬೇಕು ಅಂತಾರೆ…..ಕವಿ
ಎ.ಎನ್.ರಮೇಶ್. ಗುಬ್ಬಿ ಅವರು…..!👇

ಅನುಭಾವ..!

ಮಾತುಗಳಿಲ್ಲದ ಮೌನ
ಮೌನವಲ್ಲ..!
ಭಾವಗಳಿಲ್ಲದ ಮೌನ
ನಿಜಮೌನ.!

ಮನ ನಿರ್ಲಿಪ್ತವಾದರೆ
ಧ್ಯಾನವಲ್ಲ..!
ಮನ ನಿರ್ವಾತವಾದರೆ
ನಿಜಧ್ಯಾನ.!

ತಟಸ್ಥೆಯೊಳು ಬೆಳಕಿನ
ದಿವ್ಯದರ್ಶನ..!
ಅಂತರಾತ್ಮನೊಂದಿಗೊಂದು
ಸಂದರ್ಶನ..!

ಅವ್ಯಕ್ತ ಅನಂತತೆಯೊಳು
ಜೀವ ಲೀನ.!
ಅವರ್ಣನೀಯ ಅನುಭಾವದಿ
ಭಾವ ವಿಲೀನ..!

 

-ಎ.ಎನ್.ರಮೇಶ್. ಗುಬ್ಬಿ.
*****