🇮🇳 ಆಗಷ್ಟ 15🇮🇳
ಸ್ವಾತಂತ್ರ್ಯ ದಿನಾಚರಣೆ
ಸ್ವಾತಂತ್ರ್ಯ ತಂದು ಕೊಟ್ಟರು
ಅಂದು
ಸ್ವತಂತ್ರವಾಗಿ ಬದುಕುತ್ತಿಹೆವು
ನಾವೆಲ್ಲರೂ ಇಂದು !
ಇತಿಹಾಸದ ಪುಟ ಪುಟಗಳಲ್ಲಿ
ಅಚ್ಚೊತ್ತಿವೆ
ಹೋರಾಟದ ಅತ್ಯದ್ಭುತ ಕ್ಷಣ
ಎಲ್ಲರ ಮನದಲ್ಲೂ
ಝೇಂಕರಿಸಲಿ ಸದ್ಗುಣ !
ಪರತಂತ್ರವ ಸಹಿಸದೆ
ಹಗಲಿರುಳು ಹರತಾಳಗಳು
ಸ್ವಾತಂತ್ರ್ಯಕ್ಕಾಗಿ ಗಲಭೆಗಳು
ಎಣಿಕೆಗೆ ನಿಲುಕದ
ಸಾವು – ನೋವು
ನಿತ್ಯ ನಿರಂತರ ನಿದಿರೆ ಇರದ
ಹೋರಾಟದ ಫಲಪ್ರದವಾಗಿ
ಆಗಸ್ಟ್ 14 ರ ತಡರಾತ್ರಿ
ಸ್ವಾತಂತ್ರ್ಯ ದಕ್ಕಿತು
ಸ್ವತಂತ್ರ ಸಿಕ್ಕಿತು !
1947 ರ ಆಗಸ್ಟ್ 15 ರಂದು
ಸಿಕ್ಕಿತು ಸ್ವಾತಂತ್ರ್ಯ
ನಮಗೂ ಸ್ವತಂತ್ರವಾಗಿ
ಬದುಕಲು ಹಕ್ಕಿದೆ,
ಒಕ್ಕೊರಲಿನ ಕೂಗು
ಇನ್ನೇಕೆ ಅತಂತ್ರ ? !
ಬ್ರಿಟಿಷರ ಕಪಿಮುಷ್ಟಿಯಿಂದ ಕಸಿದು
ಭದ್ರತೆಗೆ ಬುನಾದಿ ಹಾಕಿ
ಎಲ್ಲರೂ ಸಂತೋಷದಿಂದ ಬಾಳಲು
ಅಹೋರಾತ್ರಿ ಹೋರಾಟ ನಡೆಸಿ
ಭವಿಷ್ಯಕ್ಕೆ ಬೆಳಕಾದವರು
ಇವರುಗಳು
ಸ್ವಾತಂತ್ರ್ಯ ಹೋರಾಟಗಾರರ
ಹೆಸರುಗಳು !
ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ
ನಾನಾ ಸಾಹೇಬ, ರಾಣಿ ಲಕ್ಷ್ಮೀಬಾಯಿ
ಬಹಾದುರ್ ಶಾಹ್ ಜಫರ್,ತಾತ್ಯ ಟೋಪಿ
ರಾಜಾರಾಂ ಮೋಹನ್ ರಾಯ್
ಚಿತ್ತರಂಜನ್ ದಾಸ್, ಬಿಪಿನ್ ಚಂದ್ರ ಪಾಲ್
ಎನಿ ಬೆಸೆಂಟ್, ದಾದಾಭಾಯ್ ನೌರೋಜಿ
ವೀರ್ ಸಾವರ್ಕರ್, ಚಂದ್ರಶೇಖರ ಆಜಾದ್
ವೀರ ಭಗತ್ ಸಿಂಗ್, ರವೀಂದ್ರನಾಥ ಠಾಗೋರ್
ಅಬ್ದುಲ್ ಕಲಾಂ ಆಜಾದ್
ಜಯಪ್ರಕಾಶ್ ನಾರಾಯಣ್
ಜವಾಹರಲಾಲ್ ನೆಹರು
ಡಾ. ಭೀಮರಾವ್ ಅಂಬೇಡ್ಕರ್
ಬಾಲಗಂಗಾಧರ ತಿಲಕ್, ಕಸ್ತೂರಬಾ ಗಾಂಧಿ
ಲಾಲಾ ಲಜಪತ ರಾಯ್
ಸರೋಜಿನಿ ನಾಯ್ಡು
ಇನ್ನೂ ಅನೇಕಾನೇಕರು
ಸ್ವಾತಂತ್ರ್ಯ ತಂದು ಕೊಟ್ಟವರು !
ಸ್ವಾತಂತ್ರ್ಯ ಹೋರಾಟದಿ
ಶ್ರಮಿಸಿದ ಸಾಧಕರನ್ನು
ಯಾವತ್ತೂ ನೆನೆಯೋಣ ;
ಅಚಲವಾದ ನಂಬಿಕೆಯಿಟ್ಟು
ಜೀವನ್ಮರಣದೊಂದಿಗೆ ಹೋರಾಡಿದ
ಧೀರರಿಗೆ ಮನಃಪೂರ್ವಕವಾಗಿ
ನಮಿಸೋಣ !
ಹೋರಾಡಿದ ಮಹಾ ವೀರರಿಗೆ
ಸಾವಿರದ ನಮನ
ಭಕ್ತಿಯಿಂದ ಸ್ಮರಿಸೋಣ, ಅನುಸರಿಸೋಣ
ಅನುದಿನ !
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****