ಮಕ್ಕಳು ಪಾಠದ ಜತೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು -ಹಿರಿಯ ಪತ್ರಕರ್ತ ಸಿ.ಜಿ ಹಂಪಣ್ಣ

ಬಳ್ಳಾರಿ, ಆ.15: ಮಕ್ಕಳು, ಶಾಲಾ ವ್ಯಾಸಂಗದ ಜತೆಗೆ ದೇಶಭಕ್ತಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುತಸ್ಕೃತ, ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣ ಹೇಳಿದರು.
ನಗರದ ತಾಳೂರುರಸ್ತೆ ಶ್ರೀನಗರದ ಶ್ರೀಗುರು ನಿಲಯದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ನಿಮ್ಮ ಓದಿನ ಜತೆಗೆ ಜಾನಪದ, ಸಂಗೀತ ,ಕಲೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ವಿಶೇಷ ಪ್ರಾಂತ್ಯವಾಗಿದ್ದು, ಮಕ್ಕಳಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಇವುಗಳ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಗಂಗಣ್ಣ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಕಲಿತದ್ದು, ಕೊನೆವರೆಗೆ ನಮ್ಮ ಬಳಿ ಇರುತ್ತೆ ಹೀಗಾಗಿ, ನಾಟಕ, ಸಾಹಿತ್ಯ, ಕಲೆಗಳನ್ನು ಈಗಿನಿಂದಲೇ ಕಲಿಯಲು ಆರಂಭಿಸಿದರೆ ಮುಂದಿನ ದಿನಗಳಲ್ಲಿ ಕಲೆ ,ಸಾಹಿತ್ಯ,ಸಂಸ್ಕಾರ ನಿಮ್ಮದಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಹಾಗೂ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು‌ ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಾಯಿ ಶೃತಿ, ಪ್ರಾರ್ಥಿಸಿದರು. ಭಾರತಿ ಜಿ.ಪಿ ವಂದಿಸಿದರು.
ಮಕ್ಕಳಾದ ರಷ್ಮೀ, ಪದ್ಮ,ಮನು, ಪ್ರಮೋದ್, ಮೌಲಾಲಿ, ಹರ್ಷ ದೇಶಭಕ್ತಿ ಗೀತೆಗಳನ್ನು ಹಾಡಿದರು , ಶ್ರೀನಗರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
*****