ಅನುದಿನ ಕವನ-೨೩೧, ಕವಿ: ವಿಜಯಕುಮಾರ ಉಪ್ಪಾರ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಗಾಂಧೀಜಿ

ಗಾಂಧೀಜಿ …..೧
ಎಲ್ಲರೂ ಗಾಂಧೀಜಿ ಆಗಬಾರದೇಕೆ?
ಗಾಂಧೀಜಿ ಒಳಗೆ ಎಲ್ಲರೂ ಒಂದಾಗಬಾರದೇಕೆ? ಯಾರಾದರೂ ಒಬ್ಬರು ಮತ್ತೆ
ಗಾಂಧೀಜಿ
ಆಗಬಾರದೇಕೆ?
ಎಲ್ಲರಿಗೂ ಗಾಂಧೀಜಿ ಬೇಕಿಲ್ಲವೇಕೆ?
ಗಾಂಧಿ ಕ್ಲಾಸಿ ನಂತೆ
ಗಾಂಧಿ ಟೋಪಿಯಂತೆ
ಗಾಂಧಿ ಕಟಿಂಗ್ ನಂತೆ!
ಎಲ್ಲರಿಗೂ ಬೇಕಲ್ಲವೇ? ಗಾಂಧೀಜಿ!
ಗಾಂಧಿ ನೋಟಿನಂತೆ!
ಎಲ್ಲರಿಗೂ ಬೇಕಲ್ಲವೇ? ಭಾರತ!
ಗಾಂಧೀಜಿಯಂತೆ

ಬಾಪು….೨
ನಮ್ಮೆದೆಯಲಿ ಇರಲಿ ಬಾಪು
ನಿಮ್ಮೆಡೆಗೆ ಬರಲಿ ಬಾಪು
ಬಿರುನುಡಿಗೆ ಉತ್ತರ ಬಾಪು
ಸರಳತೆಯ ದೀಪ ಬಾಪು
ಮಗುವಿನ ಹೃದಯ ಬಾಪು
ಸತ್ಯದ ದರ್ಶನ ಬಾಪು
ಅಹಿಂಸೆಯ ಪ್ರತಿ ಪದ ಬಾಪು
ಸ್ವಾತಂತ್ರ್ಯ ದ ನಗೆಯೇ ಬಾಪು
ಭಾರತದ ಭವಿತವ್ಯವೇ ಬಾಪು

– ವಿಜಯ್ ಉಪ್ಪಾರ, ಹಗರಿಬೊಮ್ಮನಹಳ್ಳಿ
*****