ಪಕ್ಕವಾದ್ಯಗಳು…..
ಪ್ರೀಯೆ ಹೊರಟಿರುವೆನು ಕವಿಗೋಷ್ಟಿಗೆ !
ಮತ್ಯಾಕೆ ಪಕ್ಕವಾದ್ಯಗಳು ಪ್ರೀಯಾ ?
ಸ್ವರ ಶೃತಿ ಹಿಡಿಯಲು
ನಡುನಡುವೆ ತಿಳಿಯದಿದ್ದರೂ
ವಾವಾ ವಾವಾ ಅನ್ನಲು !
ಇವರೇ ಬೇಕೆನು ಹಾಗನ್ನಲು?
ಲಿಂಗಣ್ಣ-ಶಿವಣ್ಣ ಮೆಚ್ಚಿ ಅಹುದಹುದು ಅನ್ನುವುದಿಲ್ಲವೇ !
ಶಿವಣ್ಣಂಗೆ ಪಂಚಾಮೃತದಭಿಷೇಕ ಮಾಡಿಸಿಲ್ಲವಂತೆ
ಲಿಂಗಣ್ಣನು ಮುನಿಸಿಕೊಂಡು ಕಾ ಕಾ ಅನ್ನಬಹುದು !
ಅದಕಾಗಿಯೇ ಸೀನ-ಸುಬ್ಬ-ಕಾಳರೆಂಬ
ಪಕ್ಕವಾದ್ಯಗಳಿಗೆ ನಿನ್ನೆ ಇಳಿಸಂಜೆಯಲಿ !
ತಕ್ಕ ವ್ಯವಸ್ಥೆಯೆಂಬಂತೆ ಮಾಡಿಸಿರುವೆನು
ಬಾರಮ್ಮನ ಮಂದದೀಪದಾರತಿಯ ಬೆಳಕಿನಲಿ
ಪಂಚ-ಪಡಿ-ಪದಾರ್ಥಂಗಳನು ಕೊಡಿಸಿ
ಸಂಪೂರ್ಣ ಸಜ್ಜಾಗಿರಲು ತೀರ್ಥಾಭಿಷೇಕದಲಿ
ಭಯ-ಭಕ್ತಿ ಗಾನ ಸುಧೆಯಲಿ
ಮೈಮರೆತಿರಲು ಮನೆಗೆ ತಲುಪಿಸಿದೆ
ಇಂತಿಪ್ಪ ನನ್ನ ಹಿಂಬಾಲಕರಿಗೆ ನೀ
ಪಕ್ಕವಾದ್ಯಗಳೆಂದು ನಾಮಕರಣಿಸಿದೆ !
ಮುನಿಸಿಲ್ಲ ನನಗೆ ನಿನ್ನ ಮೇಲೆ
ಮಂದಿರದ ದೇವಿ ನೀ ಪ್ರಸನ್ನಳಾಗಿರು !
ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ
ನಿಮ್ಮಪ್ಪ ಧಾರೆಯೆರೆದದ್ದು ಗೊತ್ತಿಲ್ಲವೇ ?
ಅಣ್ಣೋ ಬಾರಯ್ಯೋ ಸಮಯವಾಗುತ್ತಿದೆ
ಕವಿಗೋಷ್ಟಿಲಿ ನಿನ್ನ ಮಿಂಚಿಸಬೇಕಲ್ವಾ?
ಸಂಶಯದ ಸತಿಗೆ ಬಂದು ಉತ್ತರಿಸುವೆ
ಸೀನ-ಸುಬ್ಬ-ಕಾಳ ಸಾಕೆನ್ನ ಪುಂಗಿ ಸ್ವರಕೆ !
-ಹಿಪ್ಪರಗಿ ಸಿದ್ದರಾಮ, ಧಾರವಾಡ👆
*****