ಅನುದಿನ‌ ಕವನ-೨೩೯, ಕವಿ:ಮಹೇಂದ್ರ ಕುರ್ಡಿ, ಹಟ್ಟಿ, ರಾಯಚೂರು, ಕಾವ್ಯ ಪ್ರಕಾರ: ಹಾಯ್ಕುಗಳು….

ಹಾಯ್ಕುಗಳು…

ಹೂವೆಂದುಕೊಂಡು,
ಕೆಂದುಟಿಯ ಮುತ್ತಿದ;
ದುಂಬಿ ತಲ್ಲಣ.

ಅರಿಯಲಾರೆ,
ಕಥೆಯಲ್ಲಿನ ವ್ಯಥೆ;
ಮಡಿಲ ಕೆಂಡ.

ಪ್ರೀತಿಯ ಮನ,
ಬತ್ತದು ಎಂದೆಂದಿಗೂ;
ಹೃದಯವಂತ.

ಸಂಶಯ ಸುಳಿ,
ಆಂತರಂಗ ಬಿರುಕು;
ಸ್ಮಶಾನ ಮೌನ.

ಜೀವನ ಪಂದ್ಯ ,
ಸೋಲು ಗೆಲುವುಗಳ;
ಹೊಂದಾಣಿಕೆಯು.

ಸೋಲಿನ ಪಾಠ,
ಸೂಕ್ತ ಮನವರಿಕೆ;
ಶ್ರೇಷ್ಠ ಸಾಧಕ.

ಬಾನು ಭವಿಗೂ,
ನಿತ್ಯ ಮಿಲನದಾಸೆ;
ಅಸಂಭವವು.

ಮಗುವೊಂದಿರೆ,
ದಂಪತಿ ಕಾರಣಕೆ;
ತೋರಿಕೆ ವಸ್ತು.

ಬೆರೆಯುತಿರೆ,
ಅರಿತ ಹೃದಯಗಳು;
ಒಲುಮೆ ರಾಗ.

ಬಾಳ ಹಾದಿಯ,
ಅನುರಾಗದ ಅಲೆ;
ಶೃಂಗಾರ ಕಾವ್ಯ.

✍🏻 ಮಹೇಂದ್ರ ಕುರ್ಡಿ, ಹಟ್ಟಿ, ರಾಯಚೂರು ಜಿಲ್ಲೆ