ಅನುದಿನ‌ ಕವನ-೨೪೬, ಕವಯತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ‌ಹಡಗಲಿ, ಕಾವ್ಯ ಪ್ರಕಾರ: ಹನಿಗವಿತೆಗಳು

ದಾಂಪತ್ಯ…೧
ದಾಂಪತ್ಯದ ಏರಿಳಿತದಲ್ಲಿ
ದಿನವೂ
ನಗು-ನಗುತಿರಲು;
ಸುಂದರ
ಯುಗಳ ಗೀತೆ
ಹಗಲು-ಇರುಳು

ಯುಗಳ ಗೀತೆ….೨
ನೀನಿರದ ಹೊತ್ತು
ಕವಿತೆಯಲ್ಲಿ
ಏನೋ ಕೊರತೆ;
ನವಿಲಿನಂತೆ ಬಾ
ಜೊತೆಯಲ್ಲಿ
ಆಡೋಣ, ಹಾಡೋಣ
ಯುಗಳ ಗೀತೆ

ಮುಖ….೩
ಎದುರಿಗೆ ಬಂದರೆ
ಮುಖದಲ್ಲಿ
ನಗುವಿರಬೇಕು;
ಮುಖ ನೋಡಿ
ಮಣೆ ಹಾಕುವವರಿಗೆ
ಏನನ್ನಬೇಕು?

ನಂಟು……೪
ನನ್ನವನ
ಪ್ರೀತಿಯ ನಂಟು,
ಮೊಗೆದಷ್ಟು ಸಿಗುವ ನಿಘಂಟು!

ನಲ್ಲೇ…..೫
ಬಗೆದಷ್ಟು- ಬಗೆದಷ್ಟು
ಸಿಗುವ ಒರತೆಯ ನೀರು
ಹಾಗೆ ನೀನು
ಮೊಗೆದಷ್ಟು ಮೊಗೆದಷ್ಟು
ಮಾಸದ ಈss ನಿನ್ನ ಚೆಲುವು
ತುಟಿಯಂಚಿನ ನಗುವು!

-ಶೋಭ ಮಲ್ಕಿ ಒಡೆಯರ್
ಹೂವಿನ‌ಹಡಗಲಿ
*****