ಗದಗ, ಸೆ.9: ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬನ್ನಿಕೊಪ್ಪದ ಕೃಷ್ಣಮೂರ್ತಿ ಕುಲಕರ್ಣಿ ಅವರು ಪ್ರಸಕ್ತಸಾಲಿನ ” ಕರುನಾಡ ಚೇತನ ” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿಂತನ ವೇದಿಕೆ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಟ್ಟುವ ಮೂಲಕ ಕನ್ನಡಪರ ಕಾರ್ಯಚಟುವಟಿಕೆ ಗಮನಿಸಿ ಬೆಂಗಳೂರು ರಾಜಾಜಿ ನಗರದ ಕೆಂಪೇಗೌಡ ಕನ್ನಡ ಬಳಗ ಈ ಪ್ರಶಸ್ತಿ ಹಾಗೂ ಐದು ಸಾವಿರ ನಗದು ಬಹುಮಾನ ಷೋಷಿಸಿದೆ.
ಕಳೆದ ದಶಕದಲ್ಲಿ ಕೃಷ್ಣಮೂರ್ತಿ ಕುಲಕರ್ಣಿ ಸರ್ಕಾರದ ಯಾವುದೇ ಅನುದಾನ ಪಡೆಯದೇ ಹತ್ತು ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ನಾಡಿನ ಅನೇಕ ಮಠಾಧೀಶ ಸಾಹಿತಿಗಳನ್ನು ಸರ್ವಾಧ್ಯಕ್ಷರಾಗಿ ಗೌರವಿಸಿದ್ದಲ್ಲದೇ ಒಂದು ಲಕ್ಷಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಗ್ರಾಮೀಣ ಶಾಲೆ,
ಕಾರಾಗೃಹ, ಸಾಹಿತ್ಯಾಸಕ್ತರಿಗೆ ಉಚಿತವಾಗಿ ವಿತರಿಸಿ ಕನ್ನಡತನ ಮೆರೆದಿದ್ದಾರೆ ಎಂದು ಕೆಂಪೇಗೌಡ ಬಳಗದ ಅಧ್ಯಕ್ಷ ಮುನಿರಾಜು, ಸಂಚಾಲಕ ವೆಂಕಟೇಶ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬನ್ನಿಕೊಪ್ಪ ಗ್ರಾಮದಲ್ಲಿ ಸಂಭ್ರಮ: ಕೃಷ್ಣಮೂರ್ತಿ ಕುಲಕರ್ಣಿ ಅವರಿಗೆ ಕರುನಾಡ ಚೇತನ ಪ್ರಶಸ್ತಿ ಪ್ರಕಟವಾಗಿರುವುದಕ್ಕೆ ಗ್ರಾಮದ ಬ್ರಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಅನೇಕ ಗಣ್ಯರು ಸಂತಸ ವ್ಯಕ್ತಪಡಿಸುತ್ತಾರೆ.
*****