ಸ್ವಾರ್ಥ
ತಲೆಗಳೆಣಿಸುತ್ತಿದ್ದಾರೆ
ಮನಗಳೆಣಿಸುತ್ತಿದ್ದಾರೆ
ಸ್ವಾರ್ಥದ ಸಂಖ್ಯೆಯೊಳಗೆ
ಆಸೆ ಬಿಟ್ಟವರಂತೆ
ಸರ್ವವನ್ನು ತ್ಯಜಿಸಿದವರಂತೆ
ಸಮಾಜದ ಕಣ್ಣೊಳಗೆ
ಸಮಾಜ ಅವರೊಳಗೊ
ಅವರೊಳಗೆ ಸಮಾಜವೊ
ಎಂಬ ಜವಬ್ಧಾರಿಯುತ ಮುಖವಾಡದೊಳಗೆ
ಸ್ವಾರ್ಥ ಸಾಧನೆಯೊಳಗೆ
ನಿಸ್ವಾರ್ಥದ ಹಾದಿಯೊಳಗೆ
ಸ್ವಾ-ನೀ-ನಾ ಮಂತ್ರದೊಳಗೆ
ಗೆದ್ದವರಾರು ? ಸೋತವರಾರು ?
ಗೆಲವು ಸೋಲಲ್ಲ
ಸೋಲು ಗೆಲುವಲ್ಲ
ಸಮಾಜಕ್ಕೆ ಸೋತವರು
ಸೋತು ಸಮಾಜ ಗೆದ್ದವರು
ಮುಖವಾಡಗಳಿಗೆ ಮುಖವಾದವರು
ಉದುರುತ್ತವೆ ಎಲೆಗಳು
ಉರುಳುತ್ತವೆ ತಲೆಗಳು
ಸಮಾಜದ ಪ್ರಕೃತಿ
ನಿರಂತರ ಹೊಸ ಕೃತಿ
-ಜಡಿಯಪ್ಪ ಗೆದ್ಲಗಟ್ಟಿ, ಮೈಸೂರು