ಸೆ. 15 ರಂದು ಹೊಸಪೇಟೆ ಪಿಡಿಐಟಿ ಇಂ. ಕಾಲೇಜಿನಲ್ಲಿ ೫೪ ನೇ ಇಂಜಿನಿಯರ್ಸ್ ದಿನಾಚರಣೆ

ಹೊಸಪೇಟೆ: ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಮುನಿರಾಬಾದ್ ನ ‘ದಿ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್’ ಇವರ ಸಹಯೋಗದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ೧೬೧ನೇ ಜನ್ಮದಿನಾಚರಣೆ ಅಂಗವಾಗಿ ೫೪ ನೇ ’ಇಂಜಿನಿಯರ್ಸ್ ದಿನಾಚರಣೆ’ ಕಾರ್ಯಕ್ರಮವನ್ನು ಸೆ. ೧೫ ರಂದು ಬುಧವಾರ ಬೆಳಿಗ್ಗೆ ೧೦.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿಯ ಬಿ.ಐ.ಟಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಸದ್ಯೋಜಾತ ಕೆ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ’ಕೋವಿಡ್ ನಿಂದ ಚೇತರಿಕೆಯ ಹಾದಿಯಲ್ಲಿ; ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ ಎಂಜಿನಿಯರ್ಗಳ ಪಾತ್ರ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅವರು ವಹಿಸಲಿದ್ದಾರೆ. ಮುನಿರಾಬಾದಿನ ’ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್’ ಘಟಕದ ಅಧ್ಯಕ್ಷ ಪ್ರಹ್ಲಾದ್, ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್ ಹಾಗೂ ವಿವಿಧ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್ ತಿಳಿಸಿದ್ದಾರೆ.


*****