ಅನುದಿನ ಕವನ: ೨೫೯, ಕವಿ: ಮುದೆನೂರ ಉಮಾಮಹೇಶ್ವರ, ಹೊಸಪೇಟೆ, ಕವನದ ಶೀರ್ಷಿಕೆ: ಮುಖವಾಡಗಳು

 

ಮುಖವಾಡಗಳು👇

ಜಗತ್ತು ಹೇಳಿಕೊಟ್ಟಿದೆ
ತಪ್ಪದೆ ಮುಖವಾಡ ಹೊತ್ತು ಬನ್ನಿ ಎಂದು.
ಆಧಾರ ನಿನ್ನ ಹೆಸರು
ದೂರವಾಣಿ ನಿನ್ನ ಆಸ್ತಿ
ರೇಷನ್ ಕಾರ್ಡು ನಿನ್ನ ಊರು
ಸಂಚಾರ ನಿನ್ನ ಶಾಲೆ
ಎತ್ತಂಗಡಿ ನಿನ್ನ ಕೆಲಸ
ಅಲೆಯಲಿಕ್ಕೆ ಮತದಾನ
ಮತಾಂತರಕ್ಕೆ ಧರ್ಮ
ಇತಿಹಾಸಕ್ಕೆ ಸಂಚಗಾರ
ಬಯಲು ನಾಚುವ ಕಾರ್ಯಭಾರ
ಹೆಂಗೂಸಿನ ಗುಪ್ತ ಜ್ಞಾನ ಯುವತಿಯ ಕಾಮಹತ್ಯ
ಹೆಮ್ಮಾರರ ಹವಣಿಕೆಗಳ
ಅತ್ಯಾಚಾರ
ದುಶ್ಯಾಸನರ ಅಟ್ಟಹಾಸ
ಶೋಷಿತ ವಿರೂಪ ಪ್ರಜ್ಞೆ
ಅಪಹರಣಗಳ ಸಾಕ್ಷಿ
ಅಪಮಾನ ಬದುಕು
ಮಾನ ಹರಾಜಿನ ಸಂಚು
ಹೊಸ ಹೊಸ ಅಲೆಗಳು
ಸಂಚಿಕೆಯಲ್ಲೆ ಮರೆಯಾದ
ಶಿಲೀಂದ್ರ ಮುಖ ಮಿಂಚಿಲ್ಲದ
ಕಣ್ಣೀರಿಗೆ ಸೆಲೆ ಒಡೆದು ಕನ್ನಡಿ ಹಿಡಿದು ಕಾಣುತ್ತಿವೆ. ಕನವರಿಕೆ
ಕನಸು ಕರಿಮೋಡ ಕರಾಳ
ರಾತ್ರಿಗಳನ್ನೇ ಬಯಸಿ
ಭೂಮಿಗೂ ಮಸಿ ಹಚ್ಚುತ್ತಿವೆ
ನಿದ್ದೆ ಬಾರದ ಎಚ್ಚರ
ಹೆಣದ ಹೊಳೆ ಹರಿಯುತ್ತಿವೆ
ಕವಿಯ ಕಾವ್ಯ ಬತ್ತಿ
ಆರಿ ಹೋಗಿವೆ. ಬೂದಿಯಾಗದ
ಬೆಂಕಿ ತಣ್ಣಗಾಗದ ಕೆಂಡ
ಬಣ್ಣ ಹಚ್ಚಿದ ಮಳೆ
ನೆನೆಯಲಾರದ ಹನಿ ಸುರಿಸಿವೆ

-ಮುದೆನೂರ ಉಮಾಮಹೇಶ್ವರ
ಹೊಸಪೇಟೆ

One thought on “ಅನುದಿನ ಕವನ: ೨೫೯, ಕವಿ: ಮುದೆನೂರ ಉಮಾಮಹೇಶ್ವರ, ಹೊಸಪೇಟೆ, ಕವನದ ಶೀರ್ಷಿಕೆ: ಮುಖವಾಡಗಳು

Comments are closed.