ಅನುದಿನ ಕವನ-೨೬೬, ಕವಿ: ಜಿ ಟಿ ಆರ್ ದುರ್ಗ, ಜಿ ಹೆಚ್ ಎಲ್, ಬಂಗಾರಪೇಟೆ, ಕವನದ ಶೀರ್ಷಿಕೆ: ಕಣ್ಣಾ‌ಮುಚ್ಚಾಲೆ

ಕಣ್ಣಾಮುಚ್ಚಾಲೆ

ನ್ಯಾಯುತವಾಗಿ ಬದುಕುವವನಿಗೆ
ಸತ್ಯದ ಬಾಗಿಲು ತೆರೆದಿರುತ್ತದೆ
ಅನ್ಯಾಯ ಮಾಡುವವನಿಗೆ
ಘೋರ ಶಿಕ್ಷೆಯು ಆಹ್ವಾನಿಸುತ್ತದೆ

ಕೆಟ್ಟತನವು ಮುಳ್ಳು ತುಳಿದಂತೆ
ಸುಲಭವಾಗಿ ರಕ್ತ ಸುರಿಸುತ್ತದೆ
ಒಳ್ಳೆತನವು ಕಠಿಣ ಬಂಡೆಗಲ್ಲಿನಂತೆ
ಶಿಲೆಯ ಕೆತ್ತಿದ ಶಿಲ್ಪಿಗೆ ಹರುಷವಾದಂತೆ

ಮೋಸ ವಂಚಕನಿಗೆ ತನ್ನಾತ್ಮ ಹೇಳುವುದು
ನಾನು ಇಷ್ಟೊಂದು ನೀಚತನದವನೆಂದು
ನ್ಯಾಯ ನೀತಿ ಸತ್ಯವಂತನಿಗೆ ಹೇಳುವುದು
ನಾನು ಹುಟ್ಟಿ ಒಂದೊಳ್ಳೆ ಕೆಲಸ ಮಾಡಿದೆನೆಂದು

ಹಣದಿಂದ ಚಪ್ಪಾಳೆ ಘೋಷಣೆ ಬರುವುದು
ಎಂಜಲು ಕಾಸು ತಿಂದವನಿಂದ ಮಾತ್ರನೆ
ಗುಣವಂತನಿಗೆ ಅವನು ಪಟ್ಟ ಪರಿಶ್ರಮದಿಂದ
ಇಡೀ ಜಗತ್ತೇ ಮೆಚ್ಚಿಕೊಳ್ಳುವುದು ಹರುಷದಿಂದ

ಒಳ್ಳೆಯವರನ್ನು ಹುಡುಕುವುದು ಕಷ್ಟ
ಕೇಡನ್ನು ಮಾಡುವವನ ಹುಡುಕುವುದು ಸುಲಭ
ಪರದೆ ಹೊರಗೆ ಇರುವರನ್ನು ಹುಡುಕುವುದಕ್ಕಿಂತ
ಪರದೆ ಮರೆಯಲ್ಲಿರುವರನ್ನು ಹೊರತರಬೇಕು

-ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ
*****