ಕವಯತ್ರಿ ಧರಣೀಪ್ರಿಯೆರವರ ಸೊಬಗು ಕೃತಿ ಲೋಕಾರ್ಪಣೆ: ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲಿ -ಸಾಹಿತಿ ಅಲ್ಲಾ ಗಿರಿರಾಜ್

ಶಿವಮೊಗ್ಗ, ಸೆ. 28: ಹಿರಿಯ ಸಾಹಿತಿ ಹೊಸಹಳ್ಳಿ ದಾಳೇಗೌಡರು ಮತ್ತು ಲೇಖಕಿ ಜಯಂತಿ ಅವರು ಬರೆದ ಪತ್ರೋತ್ಸವ ಕಾದಂಬರಿ ಮಕ್ಕಳಿಗೆ ಪಠ್ಯವಾಗಲು ಯೋಗ್ಯವಿದೆ ಎಂದು ಸಾಹಿತಿ ಅಲ್ಲಾ ಗಿರಿರಾಜ್ ಅವರು ಅಭಿಪ್ರಾಯ ಪಟ್ಟರು.
ಭದ್ರಾವತಿ ತಾಲೂಕಿನ ಬಿ.ಆರ್.ಪ್ರಾಜೆಕ್ಟ್ .ಪತ್ರ ಸಂಸ್ಕೃತಿ ಸಂಘಟನೆ ಹಾಗೂ ಬೆಂಗಳೂರಿನ ಬುದ್ಧ,ಬಸವ,ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ
“ಪತ್ರೋತ್ಸವ”ಮತ್ತು “ಸೊಬಗು”ಪುಸ್ತಕಗಳ ಲೋಕಾರ್ಪಣೆ ಹಾಗೂ ದಿವಂಗತ ದೇಶೀಗೌಡ ಶ್ರೀಮತಿ ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರೋತ್ಸವ ಕಾದಂಬರಿಯಲ್ಲಿನ ಭಾಷೆಯ ಸೊಗಡು ವಿಶೇಷವಾಗಿದೆ. ಪತ್ರಗಳ ಮೂಲಕ ಬರೆದ ಕಾದಂಬರಿ ಮಕ್ಕಳಿಗೆ ಪಾಠವಾಗಲು ಅರ್ಹತೆ ಹೊಂದಿದೆ ಎಂದು ಹೃಳಿದರು.
ಕವಯತ್ರಿ ಎಂ.ಗೀತಾತಿಪ್ಪೇಸ್ವಾಮಿ ಐಗೂರು(ಧರಣೀಪ್ರಿಯೆ) ಅವರ “ಸೊಬಗು” ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ತೆಲಗಿಯ ಕೆ.ಎಸ್.ವೀರಭದ್ರಪ್ಪ ಅವರು ಮಾತನಾಡಿ “ಸೊಬಗು” ಕೃತಿಯಲ್ಲಿ ಮನಸಿಗೆ ಮುದನೀಡುವ ಸಾಹಿತ್ಯವಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅತ್ಯಂತ ಪರಿಣಾಮ ಬೀರುವ ಸಾಮಾಜಿಕ ಕಾಳಜಿಯ ಕವನಗಳು ತುಂಬಾ ಅರ್ಥಪೂರ್ಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಡಿಸಿದರು.
ಕವನ ಸಂಕಲನದಲ್ಲಿ ಕಠಿಣ ಹಾಗೂ ವಿಶೇಷ ಅಚ್ಚರಿಮೂಡಿಸುವ ಪದಬಳಕೆಯ ಕವನಗಳಿವೆ. ಈ ಕಾಲಘಟ್ಟದಲ್ಲಿ ಇಂಥ ಕೃತಿಗಳು ಅಪರೂಪ ಎಂದರು.
ಸೊಬಗು ಕೃತಿಗೆ ಶುಭನುಡಿ ಬರೆದ ಪ್ರಖ್ಯಾತ ಸಾಹಿತಿ ಡಾ. ಕುಂ.ವೀರಭದ್ರಪ್ಪ ಅವರೇ ಮೆಚ್ಚಿರುವುದು ಸಾಕ್ಷಿ ಎಂದರು.
ವೇದಿಕೆಯಲ್ಲಿ ಅನಿಕೇತನ ಮಾಯಣ್ಣ,ಡಾ. ಲಿಂಗೇಶ್ವರ್,ಡಾ.ಬಸವರಾಜ್ ನೆಲ್ಲಿಸರ,ಅಪೇಕ್ಷ ಮಂಜುನಾಥ, ಕಾಂತೇಶ ಕದರಮಂಡಲಗಿ, ಕೂಡ್ಲೂರು ವೆಂಕಟಪ್ಪ ಮತ್ತಿತರರು ಉಪಸ್ಥಿತರಿದ್ದರು.


*****