ಅನುದಿನ ಕವನ-೨೭೧, ಕವಿ:ಶಂಕುಸುತ ಮಹಾದೇವ, ರಾಯಚೂರು ಕಾವ್ಯ ಪ್ರಕಾರ: ಗಜಲ್

ಗಜಲ್

ಹಣ್ಣಿನಲ್ಲೂ ಹುಳುಗಳುಂಟು ಜಗದಲಿ ಕಂಡೆ
ಹೂವಲ್ಲೂ ಮುಳ್ಳುಗಳುಂಟು ಜಗದಲಿ ಕಂಡೆ

ಪ್ರೀತಿಯಲ್ಲೂ ದ್ವೇಷವುಂಟು ಜಗದಲಿ ಕಂಡೆ
ಸ್ನೇಹದಲ್ಲೂ ಮೋಸವುಂಟು ಜಗದಲಿ ಕಂಡೆ

ನೈಜತೆಯಲ್ಲೂ ನಟನೆಯುಂಟು ಜಗದಲಿ ಕಂಡೆ
ನನ್ನಿಯಲ್ಲೂ ಮಿಥ್ಯವುಂಟು ಜಗದಲಿ ಕಂಡೆ

ನಗುವಲ್ಲೂ ಅಳುವುಂಟು ಜಗದಲಿ ಕಂಡೆ
ಸುಖದಲ್ಲೂ ದುಃಖವುಂಟು ಜಗದಲಿ ಕಂಡೆ

ದೇವ ಎಲ್ಲಾ ನಿನ್ನಾಟವುಂಟು ಜಗದಲಿ ಕಂಡೆ
ಅಡಿಗಡಿಗೆ ಅವಮಾನವುಂಟು ಜಗದಲಿ ಕಂಡೆ

✍️ ಶಂಕುಸುತ ಮಹಾದೇವ ರಾಯಚೂರು
*****