ಅನುದಿನ‌ಕವನ-೨೭೨, ಕವಯತ್ರಿ:ಸುಮನಾ ಕಿತ್ತೂರು, ಬೆಂಗಳೂರು, ಕವನದ ಶೀರ್ಷಿಕೆ: ಮುಗಿಯದ ಮೌನ

ಮುಗಿಯದ ಮೌನ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ
ಒಲವಿಗೆ ಚೆಲುವಿಗೆ
ಈ ಹೃದಯವೆ ನಿನಗೆ ಕಾದಿದೆ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ
ಒಲವಿಗೆ ಚೆಲುವಿಗೆ
ಈ ಹೃದಯವೆ ನಿನಗೆ ಕಾದಿದೆ

ನಾನೀಗ ನನ್ನೊಳಿಲ್ಲ
ಎಂಥಾ ಮಾಯ
ಹರಿವಿನ ತುಂಬೆಲ್ಲ ನೀನೆ
ನಿನದೆ ತವಕ
ನಿನ್ನಾತ್ಮದ ಕುಲುಮೆಯಲಿ
ನಾ ಕರಗಲೆ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ
ಒಲವಿಗೆ ಚೆಲುವಿಗೆ ಶರಣಾಗಿಹೆ

ಮಳೆಯಾಗು ನೀನು ನನಗೆ
ನನ್ನಾವರಿಸು
ನೆನೆಯಲಿ ಬದುಕೆಲ್ಲ ಹೀಗೆ
ಪ್ರೀತಿ ಹೊಳೆಯಲಿ
ಮೈ ಮನಗಳ ಸುಳಿಯಲಿ
ನಾ ಬೆರೆಯಲೆ

ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ
ಮೊಗೆದರು ಮುಗಿಯದ
ಮಧುರಾತಿಮಧುರ ದಾಹವಿದೆ

-ಸುಮನಾ ಕಿತ್ತೂರು, ಬೆಂಗಳೂರು
*****