ವಿಜಯನಗರ ಉತ್ಸವದಲ್ಲಿ ಜನಾಕರ್ಷಿಸಿದ ಸಾಂಸ್ಕೃತಿಕ ಕಲಾವೈಭವ

ವಿಜಯನಗರ(ಹೊಸಪೇಟೆ),ಅ.3: ವಿಜಯನಗರ ಉತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.
ಸಾಂಸ್ಜೃಂತಿಕ ಕಲಾವೈಭವಕ್ಕೆ ಜನರು ಫುಲ್ ಫೀದಾ ಆದರು. ಉತ್ಸವದ ಮೊದಲ ದಿನ ಖ್ಯಾತ ಕಲಾವಿದರು ಸಮಾಗಮಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಖ್ಯಾತಡ್ರಮ್ಮರ್ ಶಿವಮಣಿ, ರಾಜೇಶ ವೈದ್ಯ ಮತ್ತು ಪ್ರವೀಣಗೋಡ್ಖಿಂಡಿ ಅವರು ರಾತ್ರಿ ನಡೆಸಿಕೊಟ್ಟ ವಾದ್ಯ ಸಂಗೀತ ಸಂಗೀತ ಪ್ರೇಮಿಗಳಿಗೆ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಯಿತು.


ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಅನನ್ಯ ಭಟ್ ಅವರು ಲಘುಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಪ್ರಸ್ತುತಪಡಿಸಿದರು. ಕಲಾವಿದರಾದ ಕಲಾವತಿ ದಯಾನಂದ ಅವರಿಂದ ಲಘುಶಾಸ್ತ್ರೀಯ ಮತ್ತು ಚಲನಚಿತ್ರಗೀತೆಗಳು, ಶಹನಾಜ್‍ಅಖ್ತರ್ ಅವರು ದೇಶಭಕ್ತಿ ಆಶುಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ನೆರೆದ ಜನರ ಮನಗೆದ್ದರು.
ನಿರುಪಮ ಮತ್ತು ರಾಜೇಂದ್ರ ಅವರ ಅಭಿನವ ಡಾನ್ಸ್ ಕಂಪೆನಿ ಅವರು ಪ್ರಸ್ತುತಪಡಿಸಿದ
ವಿಜಯನಗರ ವೈಭವ-ನೃತ್ಯರೂಪಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತು.


ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಅವರು ದೇಶಭಕ್ತಿಗೀತೆಗಳು ಮತ್ತು ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಗಾಯಕಿ ಸವಿತಾ ಅವರು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆ ಅನಾವರಣ ಗೊಳಿಸಿದರು.
*****