ಅನುದಿನ ಕವನ-೨೭೫, ಕವಯತ್ರಿ: ಮಾನಸ ಗಂಗೆ, ತಿಪಟೂರು, ಕವನದ ಶೀರ್ಷಿಕೆ: ಹನಿಗವಿತೆಗಳು

ಹನಿಗವಿತೆಗಳು….

ಕೆಲವು ಖಾಯಿಲೆಗಳಿಗೆ
ಔಷಧಿಯ ಅವಶ್ಯಕತೆ ಇದೆ,
ನನಗೆ ನಿನ್ಹೆಗಲು ಸಾಕು…

***
ಬಿಡು
ಮೊದಲಿನಿಂದಲೂ ನಾವಿಬ್ಬರು
ಹೀಗೆ ಮುನಿಸಿಕೊಳ್ಳುತ್ತೇವೆ,
ಮತ್ತೆ ಮುದ್ದಿಸಿಕೊಳ್ಳುತ್ತೇವೆ…

***
ಈಗಲೂ ಈ ಜಗತ್ತು
ನಮ್ಮನ್ನು ಅನುಮಾನಿಸುವುದನ್ನ ಬಿಟ್ಟಿಲ್ಲ,
ನಾವು ಪ್ರೀತಿಸುವುದನ್ನ…

***
ದೂರಾಗುವ ಸಮಯ ಬಂದರೆ
ದೂರುಗಳನ್ನ ದೂರವಿಡುವ…

***
ಹೂ ಮುತ್ತಿಡು
ಖಾಲಿ ಹಣೆ ನನಗೆ
ಲಕ್ಷಣವಲ್ಲ…

***
ನಿನ್ನ ಪ್ರೀತಿಯಲ್ಲಿನ
ಪ್ರತಿಯೊಂದು
ಇರಿತಕ್ಕೆ
ಎದೆಯೊಡ್ಡಿ ನಿಂತವಳು ನಾ
ಸತ್ತಿದ್ದು ಮಾತ್ರ ನೀನು…

-ಮಾನಸ ಗಂಗೆ, ತಿಪಟೂರು
*****