ಧಾರವಾಡ, ಅ.23: ಬರುವ ೬೬ನೇಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಗಣಕರಂಗ ಸಂಸ್ಥೆ ‘ಕರುನಾಡ ಕಲಿಗಳ ಕಥನ’ ವಿಷಯಾಧಾರಿತ ಮುಕ್ತ ಕಥನಚರಿತ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯೋತ್ಸವದ ದಿನ ನ. ೧ರಂದು ನಡೆಯುವ ಕಥನಚರಿತೆ ಸ್ಪರ್ಧೆಗೆ ವಯಸ್ಸಿನ ನಿರ್ಬಂಧವಿಲ್ಲ. ಒಂದು ಸಾವಿರ ಪದಗಳಿಗೆ ಮೀರದಂತೆ ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ, ಹೋರಾಡಿದ, ಬಲಿದಾನಗೈದ ಅಪ್ರತಿಮ ಕಲಿಗಳ ಕುರಿತ ಸ್ವರಚಿತ ಉತ್ತಮ ಕಥನಚರಿತೆಯ ವ್ಯಾಕರಣ, ಭಾಷಾದೋಷವಿಲ್ಲದಂತೆ ರಚಿಸಿ ಕಳಿಸಬೇಕು.
ವಿಜೇತರಿಗೆ ನಗದು ಬಹುಮಾನವಾಗಿ ಪ್ರಥಮ ಬಹುಮಾನ ರೂ.೧೦೦೧/-, ದ್ವಿತೀಯ ಬಹುಮಾನ ರೂ.೫೦೧/-, ತೃತೀಯ ಬಹುಮಾನ ರೂ.೨೫೧/- ಮತ್ತು ಐದು ಮೆಚ್ಚುಗೆ ಬಹುಮಾನವಾಗಿ ಗಣಕರಂಗ ಪ್ರಕಾಶನದ ಪುಸ್ತಕಗಳು ಮತ್ತು ಇ-ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯ ನಿಯಮಾವಳಿಗಳು ಸೇರಿದಂತೆ ಹೆಚ್ಚಿನ ಮಾಹಿತಿಗೆ ಆಸಕ್ತರು ಸ್ಪರ್ಧೆಯ ಸಂಯೋಜಕ ಗಣಪತಿ ಚಲವಾದಿ (೯೭೪೦೬೯೧೪೨೯) ಮತ್ತು ಗಣಕರಂಗದ ಮುಖ್ಯಸ್ಥ ಹಿಪ್ಪರಗಿ ಸಿದ್ಧರಾಮ (೯೮೪೫೧೦೯೪೮೦) ಅವರಿಗೆ ವಾಟ್ಸಪ್ ಮೆಸೆಜ್ ಅಥವಾ ಕರೆ ಮೂಲಕ ಸಂಪರ್ಕಿಸಬಹುದು.
*****