ಕನ್ನಡ ಸೇವಾ ರತ್ನ’ ಹೊಸಹಳ್ಳಿ ದಾಳೇಗೌಡ’ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು…..
*****
ದಾಳ’ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹೊಸಹಳ್ಳಿ ದಾಳೇಗೌಡರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯವರು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟ್ ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ..
- ಪತ್ರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಶ್ರೀಯುತರನ್ನು ಕನ್ನಡದ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕ ‘ಪತ್ರ ಸಂಸ್ಕೃತಿ ದಾಳ’ ಎಂದೇ ನಾಡಿಗೆ ಪರಿಚಯಿಸಿರುವುದು ವಿಶೇಷ.
ಪತ್ರ ಸಂಸ್ಕೃತಿ ಮರೆಯಾಗುತ್ತಿರುವ ಸಂದರ್ಭದಲ್ಲಿಯೂ ಪತ್ರ ಬರವಣಿಗೆ ಉಳಿವಿಗಾಗಿ ಪತ್ರ ಮೈತ್ರಿ ಹವ್ಯಾಸಿಗಳನ್ನು ಸಂಘಟಿಸಿ ಪ್ರತಿ ವರ್ಷವೂ ಸಮಾವೇಶ ಆಯೋಜಿಸುತ್ತಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮತ, ಭದ್ರಾ ಜಲಯೋಜನೆಯ ಕಾರ್ಯಪಾಲಕ ಅಭಿಯಂತರಾಗಿ ನಿವೃತ್ತರಾದರೂ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖರಾಗಿಲ್ಲ.
ತಮ್ಮ ವಿಶ್ರಾಂತ ಜೀವನವನ್ನು ನಟನೆ, ಓದು, ಬರಹ, ಕ್ರೀಡೆ, ಪ್ರವಾಸ, ಉಪನ್ಯಾಸಗಳ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಾಳೇಗೌಡರು ಸಾಹಿತ್ಯ ಲೋಕವನ್ನು ಪ್ರವೇಶಿಸುವ ಕಿರಿಯ ಬರಹಗಾರರಿಗೆ ಉತ್ತಮ ಮಾರ್ಗದರ್ಶಕರಾಗಿ ಕವಿ, ಕವಯತ್ರಿ,ಲೇಖಕರಾಗಲು ಪ್ರೋತ್ಸಾಹಿಸುತ್ತಾ ಗುರು ಸ್ಥಾನವನ್ನು ಗಳಿಸಿರುವುದು ಇವರ ಹೆಗ್ಗಳಿಕೆ.
ಯಾವುದೇ ಪ್ರಚಾರ, ಪ್ರಶಸ್ತಿಗಳನ್ನು ಬಯಸದೇ ಇದ್ದರು
ಇವರ ಸಾಹಿತ್ಯ, ಸಾಮಾಜಿಕ ಕಾರ್ಯಗಳಿಗೆ ಕಸಾಪ ಸೇರಿದಂತೆ ಹತ್ತು ಹಲವು ಸಂಘಟನೆಗಳು ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ.
“ಬರೆದುಕೊಳ್ಳೋಣ, ಬರೆಯೋಣ, ಬೆಳೆಸೋಣ,ಬದುಕೋಣ” ಎಂದು ಅತ್ಯಂತ ಪ್ರೀತಿಯಿಂದ ಕರೆ ನೀಡುವ ಹಿರಿಯ ಸಾಹಿತಿ ದಾಳೇಗೌಡರ ಅವರ ಜನ್ಮ ದಿನ ಇಂದು. ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಇವರ ಶಿಷ್ಯೆ ಕವಯತ್ರಿ ದಾವಣಗೆರೆಯ ಧರಣೀಪ್ರಿಯೆ ಅವರು ಕವಿತೆ ರಚಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ….👇
🌹ಗುರು ನಮನ🌹
🌹೬೫ನೇ ಹುಟ್ಟು ಹಬ್ಬದ ಶುಭಾಶಯಗಳು🌹
ಅರಿವು ತುಂಬುವ ಗುರು
(ಭಾಮಿನಿ ಷಟ್ಪದಿಯಲ್ಲಿ)
ಅರಿವು ತುಂಬುವ ಗುರುವ ಕಂಡೆನು
ಗುರುವೆ ನಿಮ್ಮಯ ಜನುಮ ದಿನವಿದು
ಬೆರಗು ಮೂಡುವ ಪತ್ರ ಸಂಸ್ಕೃತಿ ಸೆಳೆದು ಜನಮನವ|
ಶರಣು ಮಾಡುವೆ ದಿನವು ನೆನೆಯುತ
ಹರನ ಬೇಡುವೆ ಕರವ ಮುಗಿಯುತ
ವರವ ಕರುಣಿಸಿ ದಾಳೆ ಗೌಡರ ಹರಸಿ ಕೃಪೆತೋರು||
ಕಲಿವ ಲೋಗರ ಕಂಡು ಹೇಳುತ
ಛಲವ ತುಂಬುತ ಮಾತಿನಿಂದಲೆ
ಗೆಲುವ ಮಂತ್ರವ ನಿತ್ಯ ಬೋಧಿಸಿ ತಮ್ಮ ಬಾಳಿನಲಿ|
ಹಲವು ಮಂದಿಗೆ ಬುದ್ಧಿ ಹೇಳುತ
ಸಲಹೆ ಸೂಚನೆಯನ್ನು ನೀಡುತ
ಕೆಲವು ಜನಗಳು ಮುಂದೆ ಬಂದರು ತಿಳಿದು ಬರಹದಲಿ|
ಹೊರಗೆ ಸಂಸ್ಕೃತಿ ಬರಹ ಗೋಡೆಗೆ
ಸುರಿದು ನೀರನು ಬೆಳೆಸಿ ಗಿಡಗಳ
ತೆರೆದ ನೀರಿನ ತೊಟೃಯೊಳಗಡೆ ನಗುವ ನೈದಿಲೆಯು|
ಹರಸಿಬಂದಿವೆ ಬಿರಿದುಕಾಣಿಕೆ
ಬರುವಜನಗಳ ಕರೆದು ತನ್ನೆಡೆ
ಧರಣಿ ನಮಿಸುತ ಶುಭವಕೋರಿದೆ ಹುಟ್ಟು ಹಬ್ಬದಲಿ||
-ಧರಣೀಪ್ರಿಯೆ
ದಾವಣಗೆರೆ
*****