ಬಳ್ಳಾರಿ, ನ.೧: ನಗರದ ಹಾವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 66ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಿಕ್ಷಣ ಪ್ರೇಮಿ ಬಾಬುರಾವ್ ಅವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆದ ಶಾಲೆಯ ಮುಖ್ಯಗುರು ಸಿ. ನಿಂಗಪ್ಪ ಅವರು ಮಾತನಾಡಿ,
ನಮ್ಮ ಶಾಲೆಯ ಸುತ್ತಮುತ್ತ 4 ಖಾಸಗಿ ಶಾಲೆಗಳಿದ್ದರೂ, ಪ್ರಸ್ತುತ ವರ್ಷ 400 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ಶಾಲೆಯ ಎಲ್ಲಾ ಶಿಕ್ಷಕ ವೃಂದದವರ ಪರಿಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿ ಬಿಜೆಪಿ ಮುಖಂಡ ವೆಂಕಟರೆಡ್ಡಿ ಶುಭಾಶಯ ಕೋರಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸದಸ್ಯರು, ಪಾಲಕ-ಪೋಷಕರು, ಶಾಲೆಯ ಶಿಕ್ಷಕರಾದ ಶೌರಮ್ಮ, ಅನಿತಾ, ವಿಜಯಲಕ್ಷ್ಮಿ, ಶೀಲಾ, ಜೋಶಿ ಸಂಗೀತ ರಶ್ಮಿ, ಜ್ಯೋತಿ, ಜಯಾ , ಉಮಾ ಮಹೇಶ್ವರಿ, ಫಣಿ ಭೂಷಣ ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಬ್ರೆಡ್ ವಿತರಿಸಿದರು.
ಶಿಕ್ಷಕರು ಕನ್ನಡ ರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿ ಕನ್ನಡ ಭಾಷೆ ನಾಡು-ನುಡಿ ಬಗ್ಗೆ ಅಭಿಮಾನವಿರಬೇಕು ಎಂದು ಹೇಳಿದರು.
ಹಲಕುಂದಿ ವಿಬಿಎಸ್ ಮಠ ಶಾಲೆ: ತಾಲೂಕಿನ ಹಲಕುಂದಿ ವಿಬಿಎಸ್ ಮಠ ಸಕಿಪ್ರಾ ಶಾಲೆಯಲ್ಲೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರಗಳಿಂದ
ಆಚರಿಸಲಾಯಿತು.
ಮುಖ್ಯಗುರುಗಳಾದ ಶೇಕನ್ ಬಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಹಶಿಕ್ಷಕಿ ಮೀನಾಕ್ಷಿ ಕಾಳೆ ಮತ್ತಿತರರು ಉಪಸ್ಥಿತರಿದ್ದರು.
*****