ಕನ್ನಡ ನಾಡಿನ ಹೆಮ್ಮೆ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ನ.11ರಂದು ರಾಜ್ಯಾದಾದ್ಯಂತ ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. ಮೊದಲಬಾರಿಗೆ ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಆಚರಿಸಲು ನಿರ್ಧರಿಸಿತ್ತು. ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯನ್ನು ಕಾರ್ಯಕ್ರಮವನ್ನು ಮುಂದೂಡಿದೆ. ಆದರೆ ಸಂಘ ಸಂಸ್ಥೆಗಳು ವೀರನಾರಿಯ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಂದಾಗಿವೆ.
ಕರ್ನಾಟಕ ಕಹಳೆ ಡಾಟ್ ಕಾಮ್ ಸರ್ವರಿಗೂ ವೀರವನಿತೆ ಒನಕೆ ಓಬವ್ವ ಅವರ ಜಯಂತೋತ್ಸವ ಶುಭಾಶಯಗಳನ್ನು ಕೋರುತ್ತದೆ.
*****
ಕುವೆಂಪು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರ
‘ಒನಕೆ ಓಬವ್ವ ಮಹಾ ತಾಯೆ’ ಕವಿತೆಯನ್ನು ಪ್ರಕಟಿಸುವುದರ ಮೂಲಕ ಮಹಾತಾಯಿಯ ಶೌರ್ಯವನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.
(ಸಂಪಾದಕರು)
ರಾಗ ಸಂಯೋಜನೆ: ಶಾರದ ಕೊಪ್ಪಳ, ಸಂಗೀತ ಶಿಕ್ಷಕರು, ಹಗರಿಬೊಮ್ಮನಹಳ್ಳಿ
ಸಮೂಹ ಗಾಯನ: ಶ್ರೀ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು, ವಲಭಾಪುರ, ಹ ಬೊ ಹಳ್ಳಿ ತಾ. ವಿಜಯನಗರ ಜಿಲ್ಲೆ
ಒನಕೆ ಓಬವ್ವ ಮಹಾ ತಾಯೆ
ಅನ್ನ-ಆಶ್ರಯದ ಋಣವ ತೀರಿಸಿದಾಕೆ
ಸತಿಧರ್ಮ ಪಾಲಿಸಿದಾಕೆ
ನೆಲ-ಜಲ-ಜನ ರಕ್ಷಿಸಿದಾಕೆ
ಇಳಿದು ಬಾ ತಾಯೇ| ಇಳಿದು ಬಾ
ಒನಕೆ ಓಬವ್ವ ಮಹಾ ತಾಯೆ ಇಳಿದು ಬಾ ||೧||
ಮತಿಗೆಟ್ಟವರ ಹುಟ್ಟಡಗಿಸಲು
ಅಹಂಕಾರಿಗಳ ಪಥನಗೊಳಿಸಲು
ಕಪಟಿಗಳ ಕರಗಿಸಲು
ಇಳಿದು ಬಾ ತಾಯೇ| ಇಳಿದು ಬಾ
ಒನಕೆ ಓಬವ್ವ ಮಹಾ ತಾಯೆ | ಇಳಿದು ಬಾ ||೨||
ಸಮ ಸಮಾಜದ ಬೀಜ ಬಿತ್ತಲು ಬಾ
ಸಮಾಜ ಘಾತಕರನು ನಿರ್ಮಲಗೊಳಿಸಲು ಬಾ
ಕುತಂತ್ರಿಗಳ ಹುನ್ನಾರ ಬಯಲುಗೊಳಿಸಲು ಬಾ
ಇಳಿದು ಬಾ ತಾಯೇ| ಇಳಿದು ಬಾ
ಒನಕೆ ಓಬವ್ವ ಮಹಾ ತಾಯೆ ಇಳಿದು ಬಾ ||೩||
ಜಾತಿಮರದ ಬೇರು ಕಿತ್ತು
ವರ್ಣದ ಕಣ್ಣು ಕಿತ್ತು
ಮನುಷ್ಯತ್ವದ ಮರ್ಮ ತಿಳಿಸಲು
ಇಳಿದು ಬಾ ತಾಯೇ| ಇಳಿದು ಬಾ
ಒನಕೆ ಓಬವ್ವ ಮಹಾ ತಾಯೆ ಇಳಿದು ಬಾ ||೪||
ಭವದ ಬಾಳ ಹಸನಾಗಿಸಲು
ಮೋಹ-ದಾಹವ ದಹಿಸಲು
ಜೀವ-ಜೀವನ ಪಾವನವಾಗಿಸಲು
ಇಳಿದು ಬಾ ತಾಯೇ| ಇಳಿದು ಬಾ
ಒನಕೆ ಓಬವ್ವ ಮಹಾ ತಾಯೆ ಇಳಿದು ಬಾ ||೫||
-ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ,
ಸಹಾಯಕ ಪ್ರಾಧ್ಯಾಪಕರು
ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ
ಜ್ಞಾನಸಹ್ಯಾದ್ರಿ, ಶಂಕರಘಟ್ಟ,
ಶಿವಮೊಗ್ಗ ಜಿಲ್ಲೆ
ಪಿನ್: ೫೭೭೪೫೧
*****