ಕವಯತ್ರಿ ಪರಿಚಯ:
ಕ್ರಿಯಾಶೀಲ ಶಿಕ್ಷಕಿ ಶ್ರೀದೇವಿ ಸಿ ಭಾವಿ ಅವರು ಯಾದಗಿರಿ ಜಿಲ್ಲೆಯ ಭರವಸೆಯ ಕವಯತ್ರಿಯಾಗಿಯೂ ಗಮನ ಸೆಳೆಯುತ್ತಿದ್ದಾರೆ.
ಉತ್ತಮ ಕವಿತೆಗಳನ್ನು ರಚಿಸಿರುವ ಇವರು ಅನೇಕ ಕವಿಗೋಷ್ಠಿಗಳಲ್ಲಿ ವಾಚಿಸಿ ಮೆಚ್ಚುಗೆ ಪಡೆದಿದ್ದಾರೆ. ಸಾಹಿತ್ಯಪ್ರಿಯರಾಗಿರುವ ಶ್ರೀದೇವಿ ಅವರು ಶಾಲೆಯ ಮಕ್ಕಳನ್ನು ಸಾಹಿತ್ಯಿಕವಾಗಿ
ಸಾಂಸ್ಕೃತಿಕವಾಗಿ ಹಾಗೂ ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸುತ್ತಿದ್ದಾರೆ. ಕನ್ನಡಪರ ಚಿಂತನೆಗಳು, ವಿದ್ಯಾರ್ಥಿಮುಖಿ ಚಟುವಟಿಕೆಗಳಿಂದ ಗ್ರಾಮದ ಜನತೆ ಮನಸು ಗೆದ್ದಿದ್ದಾರೆ.
ಶ್ರೀದೇವಿ ಅವರ ‘ಕನ್ನಡ ನಾಡಿನ ಕಲಿಗಳು ನಾವು’ ಕವಿತೆ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ.
(ಸಂಪಾದಕರು)
.
ಕನ್ನಡ ನಾಡಿನ ಕಲಿಗಳು ನಾವು
ಕನ್ನಡ ನಾಡಿನ ಕಲಿಗಳು ನಾವು
ಕನ್ನಡ ತಾಯಿಯ ವರ ಪುತ್ರರು ನಾವು
ಕನ್ನಡಕ್ಕಾಗಿ ಮಿಡಿಯುವದು ಮನವು
ಕನ್ನಡ ಒಂದೇ ನಮ್ಮಯ ಉಸಿರು
ಕನ್ನಡ ನಾಡಿನ ಕಲಿಗಳು ನಾವು
ಕನ್ನಡವೆಂದರೆ ತಾಯಿಯ ಮಡಿಲು
ಕನ್ನಡವೆಂದರೆ ಜೇನಿನ ಹನಿಯು
ಕನ್ನಡವೆಂದರೆ ಮಧುರ ಧ್ವನಿಯು
ಕನ್ನಡಕ್ಕಾಗಿ ದುಡಿಯುವ ನಾವು
ಕನ್ನಡ ನಾಡಿನ ಕಲಿಗಳು ನಾವು
ಕನ್ನಡ ನಾಡು ಶಿಲ್ಪದ ಬೀಡು
ಕನ್ನಡ ನಾಡು ಗಂಧದ ಗುಡಿಯು
ಕನ್ನಡ ನಾಡು ನಮ್ಮಯ ಮನೆಯು
ಕನ್ನಡ ನಾಡಿಗಾಗಿ ನಮ್ಮಯ ತನವು
ಕನ್ನಡ ನಾಡಿನ ಕಲಿಗಳು ನಾವು
-ಶ್ರೀದೇವಿ ಸಿ ಭಾವಿ
ಅಧ್ಯಾಪಕರು
ಸ. ಹಿ.ಪ್ರಾ.ಶಾಲೆ. ಕರಡಕಲ್
ತಾ.ಸುರಪುರ ಜಿ.ಯಾದಗಿರಿ.
*****