ಹಾಯ್ಕುಗಳು
೧
ಸಂಶಯ ಕಿಡಿ
ಬೆಂಕಿ ಆಗುವ ಮುನ್ನ
ಆರಿಸಿ ಬಿಡು
೨
ಚಳಿಗೆ ಅಂಜಿ
ಸೂರ್ಯ; ಹೊದ್ದು ಮಲಗಿ
ನಿಧಾನ ಎದ್ದ
೩
ಉಕ್ಕಿ ನಕ್ಕಿತು
ಶರಧಿ; ದಡಕೆಲ್ಲ
ಮುತ್ತನಿಕ್ಕುತ
೪
‘ಅಂದ’ ‘ಕೆಡಿಸು
ಶಕ್ತಿ’ ಬಿಂದು ಮಸಿಗೆ
ಬಳಸು ಚಂದ
೫
ಹೇಸಿ ಮನುಜ;
ಮುಖ ಮುಚ್ಚಿಕೊಂಡಿತು
ನಾಚಿಕೆಗಿಡ
೬
ಭ್ರಮೆಯ ಸುತ್ತ
ಸುಳಿವ ಮನ; ಭ್ರಾಂತ
ಲೋಕದಿ ಬಿತ್ತು
೭
ಚಂಚಲ ಮಾಡೂ
ನಿನ್ನ ಯೌವನಕ್ಕಷ್ಟು
ಚೌಕಟ್ಟು ಹಾಕು
೮
ಬಣ್ಣದ ಮಾತ
ಮುಖ ಕರ್ರಗೆ; ಸತ್ಯ
ಗೊತ್ತಾದ ಮೇಲೆ
೯
ಶಿಲಾಬಾಲಿಕೆ
ಅಂದ ಚೆಂದಕೆ; ಕಲ್ಲೂ
ಕರಗಿ ಹೋಯ್ತು
೧೦
ಸಾವ ಸಾಲಲೂ
ಸರದಿ ಉಂಟು; ಸ್ಪರ್ಧೆ
ತುಂಬ ನೀರಸ
– ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ
*****