ಬಳ್ಳಾರಿ, ನ.21: ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಲೇಖಕ ಡಾ. ನಿಷ್ಠಿ ರುದ್ರಪ್ಪ ಅವರು ಆಯ್ಕೆಯಾಗಿದ್ದಾರೆ.
ಈ ಕುರಿತು ಜಿಲ್ಲಾ ಕಸಾಪ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಿಸಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಲೇ ಬೆಂಬಲಿಗರು, ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಒಟ್ಟು 7084 ಮತಗಳು ಚಲಾವಣೆಯಾಗಿದ್ದು, ನಿಷ್ಠಿ ರುದ್ರಪ್ಪ ಅವರು 3978 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಟಿ.ಎಂ ಪಂಪಾಪತಿ ಅವರು 1553 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಕವಯತ್ರಿ ವಿನೋದಾ ಕರಣಂ 930, ಡಿ.ಅರುಣ್ ಕುಮಾರ್ 72, ಎಚ್.ಕೃಷ್ಣ 17, ಹಿರಿಯ ರಂಗಕರ್ಮಿ ಜಗಧೀಶ್ ಕೆ 280, ಪತ್ರಕರ್ತ ಸಿ.ಮಂಜುನಾಥ್ 164 ಮತಗಳನ್ನು ಪಡೆದಿದ್ದಾರೆ. 90ಮತಗಳು ತಿರಸ್ಕೃತ ಗೊಂಡಿವೆ.
*****