ಬಳ್ಳಾರಿ, ನ.23: ನಗರದ ಹಾವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತಾಲೂಕಿನ ಹಲಕುಂದಿಯ ವಿಬಿಎಸ್ ಮಠ ಸಕಿಪ್ರಾ ಶಾಲೆಯಲ್ಲಿ ಸೋಮವಾರ ಶ್ರೇಷ್ಠ ಸಮಾಜ ಸುಧಾರಕ ಶ್ರೀ ಕನಕದಾಸರ ಜಯಂತಿ ಆಚರಿಸಲಾಯಿತು.
ಹಾವಂಬಾವಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆದ ಶಾಲೆಯ ಮುಖ್ಯ ಗುರು ಸಿ. ನಿಂಗಪ್ಪ ಅವರು ಮಾತನಾಡಿ, ದಾರ್ಶನಿಕರಾದ ಕನಕದಾಸರ ಗುಣಗಳು, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನಾಗಪ್ಪ,
ಶಿಕ್ಷಕಿಯರಾದ ಶೌರಮ್ಮ, ಅನಿತಾ,ವಿಜಯಲಕ್ಷ್ಮಿ, ಅರುಣ್ ಜ್ಯೋತಿ,ಜಯಕ್ಕ ,ಉಮಾ ಮಹೇಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಳು ಕನಕದಾಸರು ಅವರ ಕೀರ್ತನೆಗಳನ್ನು ಹಾಡಿದರು. ಕನಕದಾಸರ ಜನಪರ ಸಾಹಿತ್ಯ, ಸಾಧನೆಯ ಕುರಿತು ಮಾತನಾಡಿದರು ಮಕ್ಕಳಿಗೆ ಸಿಹಿ ಹಂಚಲಾಯಿತು.
ಹಲಕುಂದಿಯ ವಿಬಿಎಸ್ ಮಠ ಸಕಿಪ್ರಾ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಬಳ್ಳಾರಿ ನಗರ ಆಟೋ ಮಾಲಿಕರು, ಚಾಲಕರ ಸಂಘದ ಮುಖಂಡ ನಾಗರಾಜ ಕಾಂಮ್ಲೇಕರ್ ಭಾಗವಹಿಸಿದ್ದರು.
ಸಿ.ಮಂಜುನಾಥ್ ಮಾತನಾಡಿ ಶ್ರೀ ಕನಕದಾಸರು 500 ವರ್ಷಗಳ ಹಿಂದೆಯೇ ಭಕ್ತಿ ಪಂಥದ ಮೂಲಕ ಜಾತಿ ಮತವನ್ನು ವಿರೋಧಿಸಿದ ಮಹಾ ಚೇತನ ಎಂದರು.
ಸಹ ಶಿಕ್ಷಕಿ ಮೀನಾಕ್ಷಿ ಕಾಳೆ ಮಾತನಾಡಿದರು. ಬಳಿಕ ಮಕ್ಕಳಿಗೆ ಚಾಕಲೇಟ್ ವಿತರಿಸಲಾಯಿತು.
*****