ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ನಾಮಪತ್ರ ಸಲ್ಲಿಕೆ

ಬಳ್ಳಾರಿ, ನ.23: ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಉಮೇದುವಾರಿಕೆ ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ.ಕೊಂಡಯ್ಯ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಎರಡು ಸೆಟ್ಟುಗಳಲ್ಲಿ ನಾಮಪತ್ರ ಸಲ್ಲಿಸಿದರು.
ಒಂದು ನಾಮಪತ್ರ ಸಲ್ಲಿಸುವಾಗ ಸಂಸದ ಸೈಯದ್ ನಾಸೀರ್ ಹುಸೇನ್, ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್,ಈ. ತುಕಾರಾಂ, ಬಿ.ನಾಗೇಂದ್ರ
ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ‌‌ ನಾರಾ ಸೂರ್ಯನಾರಾಯಣ ರೆಡ್ಡಿ, ಹಾನಗಲ್ ಜಿಪಂ ಮುಂಡ್ರಿಗಿ ನಾಗರಾಜ್, ಬಮನಪಾ ಕಾರ್ಪೋರೇಟರ್ ಪಿ. ಗಾದೆಪ್ಪ ಉಪಸ್ಥಿತರಿದ್ದರು.

*****