ಹೊಸಪೇಟೆ, ನ.25 : ವಿಧ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಜತೆಗೆ ಸಾಹಿತ್ಯಾಭಿರುಚಿಯನ್ನು ಬೆಳಸಿಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಹೇಳಿದರು.
ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಬೆಳಗಿನ ಪ್ರಾರ್ಥನೆಯ ಸಮಯದ ಕಾರ್ಯಕ್ರಮದಲ್ಲಿ ಬಿ.ಎ.ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ಯುವ ಧ್ವನಿ’ ಪ್ರಾಯೋಗಿಕ ಪಾಕ್ಷಿಕ ಗೋಡೆ ಬರಹ ಮೊದಲನೆ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರವಾಗಿ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ದಿನದಿಂದ ದಿನಕ್ಕೆ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧಾರ್ಥಿಗಳು ಹೆಚ್ಚುತ್ತಿದ್ದಾರೆ. ಸಮಯವು ಯಾರಿಗಾಗಿ ಕಾಯುವುದಿಲ್ಲ. ಇದನ್ನು ಅರಿತು ವಿಧ್ಯಾರ್ಥಿಗಳು ಸಮಯವನ್ನು ಸರಿಯಾಗಿ ಉಪಯೋಗಿಸಬೇಕು. ಜ್ಞಾನ ಎನ್ನುವುದು ಒಂದು ದಿನ ಒಂದು ಕ್ಷಣದಲ್ಲಿ ದೊರೆಯುವಂತ ವಸ್ತುವಲ್ಲ ಎಂದರು.
ವಿದ್ಯಾರ್ಥಿಗಳು ನಿರಂತರವಾಗಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.ಗೊಡೆ ಬರಹದಂತಹ ಪತ್ರಿಕೆಗಳು ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಕಣ್ಮೆಯಾಗುತ್ತಿವೆ. ಹೊಸ ಹೊಸ ತಂತ್ರಜ್ಞಾನದ ಯುಗದಲ್ಲಿ ಕ್ಷಣ ಕ್ಷಣದ ಮಾಹಿತಿಗಳು ನಮಗೆ ಲಭ್ಯವಾಗುತ್ತವೆ. ಮೊಬೈಲ್ ಕಂಪ್ಯೂಟರ್ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕೈ ಬರಣಿಗೆಯ ಅಕ್ಷರಗಳು ನಮ್ಮಿಂದ ದೂರ ಸರಿಯುತ್ತಿವೆ. ಆದರೂ ಅನಿವಾರ್ಯವಾಗಿ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಮಾಹಿತಿಯನ್ನು ನೀಡಿದರು.
ನಾಲ್ಕನೇ ಅಂಗವಾಗಿರುವ ಪತ್ರಿಕಾಂಗ ಸಾಮಾಜಿಕ ಕಳಕಳಿಯ ನಂಬಿಕೆಯನ್ನು ಹೊಂದಿದೆ.ಇತ್ತೀಚಿನ ದಿನಮಾನಗಳಲ್ಲಿ ಪತ್ರಿಕೋದ್ಯಮವು ಹೊಸ ತಂತ್ರಜ್ಞಾನವನ್ನು ಬೆಳಸಿಕೊಂಡು ಅಭಿವೃದ್ಧಿಯನ್ನು ಹೊಂದಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ದಿನ ಪತ್ರಿಕೆಗಳು ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳು ಸ್ಪರ್ಧಾತ್ಮಕವಾಗಿ ಸುದ್ದಿಗಳನ್ನು ಭಿತ್ತರಿಸುತ್ತಿವೆ ಎಂದು ಡಾ.ಕನಕೇಶಮೂರ್ತಿ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರುಗಳಾದಡಾ. ಟಿ ರಘು ಪ್ರಸಾದ ಡಾ. ನಾಗಣ್ಣ ಕಿಲಾರಿ, ಮೌನೇಶ ಬಡಿಗೇರ, ಗದಿಗೇಶ್, ಡಾ.ಟಿ.ಹೆಚ್ ಬಸವರಾಜ, ಡಾ.ವೆಂಕಟೇಶ ಸೇರಿದಂತೆ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*****