ವಿಶಾಖಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ: ಸಾಹಿತಿ, ಗಾಯಕ ಕುಮಾರಸ್ವಾಮಿ ಹಿರೇಮಠರಿಗೆ ಸನ್ಮಾನ

ವಿಶಾಖಾಪಟ್ಟಣ(ಎಪಿ): ಆಂಧ್ರಪ್ರದೇಶ ವಿಶಾಖಾಪಟ್ಟಣದಲ್ಲಿ ಭಾನುವಾರ ಕನ್ನಡದ ಕಲರವ…ಕನ್ನಡ ರಾಜ್ಯೋತ್ಸವದ ಸಂಭ್ರಮ!
ನಗರದ ಕಾವೇರಿ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ‌ ಸಡಗರಗಳಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ‌ಸೇವೆ ಸಲ್ಲಿಸುತ್ತಿರುವ ಸಿ ಐ ಎಸ್ ಎಫ್ ಯೋಧ ಕುಮಾರಸ್ವಾಮಿ ಹಿರೇಮಠ ಆನ್ವರಿ ಅವರನ್ನು ಇವರ ಶ್ರೀಮತಿ ಅವರೊಂದಿಗೆ ಸತ್ಕರಿಸಿ ಗೌರವಿಸಲಾಯಿತು.
ಗಣ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾಖಪಟ್ಟಣ ಕಾನೂನು‌ ವಿವಿಯ ಪ್ರಾಧ್ಯಾಪಕರಾದ ಪ್ರೊ. ದಯಾನಂದ ಮೂರ್ತಿ, ಪ್ರೊ. ನಂದಿನಿ ಮತ್ತಿತರ ಗಣ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


********