ಕಲಬುರಗಿ, ಡಿ.2: ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಸಂಜಯ ಕುಮಾರ ಕಾಶಿನಾಥ ಅವರಿಗೆ ಗುಲ್ಬರ್ಗಾ ವಿವಿ ಪಿಎಚ್.ಡಿ ಪದವಿ ನೀಡಿದೆ.
ಗುಲಬರ್ಗಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಜಯ ಕುಮಾರ ಕಾಶಿನಾಥ ಅವರು ಡಾ.ವ್ಹಿ.ಟಿ.ಕಾಂಬಳೆ ಅವರ ಮಾರ್ಗದರ್ಶನ ಮತ್ತು ಡಾ.ಬಿ.ಪಿ ಮಹೇಶಚಂದ್ರ ಗುರು ಸಹ ಮಾರ್ಗದರ್ಶನದಲ್ಲಿ “ದಿ ಸ್ಟಡಿ ಆಫ್ ಕಮ್ಯುನಿಟಿ ರಿಲೇಷನ್ಸ್ ಸಿಸ್ಟಮ್ ಪ್ರೋಸೆಸ್ ಆ್ಯಂಡ್ ಪ್ರಾಕ್ಟಿಸೆಸ್ ಆಫ್ ಮಾರ್ಡನ್ ಕಾರ್ಪೋರೇಟ್ ಹೌಸೇಸ್ ಇನ್ ಕರ್ನಾಟಕ ಆ್ಯಂಡ್ ಮಹಾರಾಷ್ಟ್ರ ಸ್ಟೇಟ್ಸ್” ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದರು.
ಅಭಿನಂದನೆ: ಗುಲ್ಬರ್ಗಾ ವಿವಿಯಿಂದ ಪಿಎಚ್.ಡಿ ಪದವಿ ಪಡೆದಿರುವ ಸಂಜಯ ಕುಮಾರ ಕಾಶಿನಾಥ ಅವರನ್ನು ವಿವಿಯ ಮಾಜಿ ಸೆನೆಟ್ ಸದಸ್ಯ, ಬಳ್ಳಾರಿಯ ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಅಭಿನಂದಿಸಿದ್ದಾರೆ.
*****