ಕಂಡೊಡನೆ ತೊಡೆ
ಏರಿ ಕುಳಿತುಕೊಳ್ಳುವ
ಬೆಕ್ಕ ಕಂಡರೆ
ಮೈದಡವಿ
ಮುದ್ದಿಸಲು ಹಾತೊರೆವ
ಮಂದಿ
ಸರಿ ರಾತ್ರಿಯ
ಸಣ್ಣ ಸಣ್ಣ ಸಪ್ಪಳಗಳಿಗೂ
ಊಳಿಡುವ ನಾಯಿಗೆ
ಶಪಿಸುತ್ತಾ
ಮಗ್ಗಲು
ಬದಲಿಸುತ್ತಾರೆ
ಇಲ್ಲದ್ದಿದ್ದರೂ…
ಬದುಕಬಹುದೇನೊ ಮನುಷ್ಯ
ತನ್ನವರು
ಮನುಷ್ಯರೇ…
ಇಲ್ಲದ್ದಿದ್ದರೆ
ಹೇಗೆ ಬದುಕುವುದು?
-ಜಹಾಂಗೀರ್ ಎಂಎಸ್
ಮರಿಯಮ್ಮನಹಳ್ಳಿ, ವಿಜಯನಗರ ಜಿಲ್ಲೆ
*****