ಮತ್ತೊಮ್ಮೆ ರಕ್ಷಿಸು ಬಾ ಅಂಬೇಡ್ಕರ್
ಬಡವ ಶೋಷಿತನಾಗಿ ಬದುಕಿದ್ದು ಹೌದು
ಆದರೆ ಇನ್ನೂ ಅಸ್ಪ್ರಶ್ಯನಾಗಿ
ಉಸಿರಾಡುತ್ತಿರುವುದು ದುರಂತ
ಮನುಷ್ಯ ಅಜ್ಞಾನಿಯಾಗಿ, ಮೂಢನಾಗಿ ಬದುಕಿದ್ದು
ನಿಜ ಆದರೆ ಮತ್ತೆ ಪುರೋಹಿತ ಬಾಹುಗಳ ಗುಲಾಮನಾಗಿರುವುದು ದುರಂತ
ಕೀಳಾಗಿ , ದುಃಖಿಯಾಗಿ ಅವಮಾನಗೊಂಡಿದ್ದು ಕೆಟ್ಟದ್ದು ಆದರೆ ಇನ್ನೂ ಅಸಮಾನತೆ, ಕ್ರೌರ್ಯ, ಶೋಷಣೆಗೆ ಬಲಿಯಾಗುತ್ತಿರುವುದು ದುರಂತ
ಜಾತಿ – ಮತ – ಧರ್ಮಗಳು ಹುಟ್ಟಿಸಿದ್ದು ಸತ್ಯ
ಆದರೆ ಇನ್ನೂ ಜಾತಿವಾದಿಗಳ ಕ್ರೂರತೆ ಕಂಡು
ಮೌನವಾಗಿದ್ದು ದುರಂತ
ಅಧಿಕಾರ ಸೌಲಭ್ಯಕ್ಕೆ ಸಂವಿಧಾನ ಶ್ರೇಷ್ಠ ಎಂದು ಹೇಳಿದ್ದು ಹೌದು ಆದರೆ ಸಂವಿಧಾನ ಬದಲಾಯಿಸುವ ಹುನ್ನಾರ ನಡೆದಿರುವುದು ದುರಂತ
ಬಾಬಾ ಸಾಹೇಬ್ ಭಾರತದಲ್ಲಿ ಹುಟ್ಟಿ ಬೆಳಕಾಗಿರುವುದು ಸತ್ಯ ಆದರೆ ಬಾಬಾ
ಸಾಹೇಬ್ ರನ್ನು ಅರ್ಥಮಾಡಿಕೊಳ್ಳಲಾಗದೆ
ಇನ್ನೂ ಕತ್ತಲ್ಲಲ್ಲಿ ಬದುಕುತ್ತಿರುವುದು ದುರಂತ
ಮತ್ತೆ ಮತ್ತೆ ಸಮಾನತೆ ಪ್ರಜ್ಞೆಯ ಸಮಾಜದಲ್ಲಿ ಉಸಿರಾಡುತ್ತಿದ್ದೇನೆ, ಮತ್ತೊಮ್ಮೆ ಅವಮಾನ, ದೌರ್ಜನ್ಯ , ಹಿಂಸೆ ಕ್ರೌರ್ಯ ಮೆರೆಯುವ ಜಾತಿವಾದಿಗಳ ಬುಡದಲ್ಲಿ ಶೋಷಿತನಾಗಿ..
ನಮ್ಮೆಲ್ಲರನ್ನೂ ರಕ್ಷಿಸಲು ಮತ್ತೊಮ್ಮೆ ಬರಬಾರದೇ ಬಾಬಾ ಸಾಹೇಬ್…!!
– ಬಾಲಾಜಿ ಕುಂಬಾರ,ಚಟ್ನಾಳ್
ಔರದ್ ತಾಲೂಕು, ಬೀದರ ಜಿಲ್ಲೆ
*****