ಜಿಲ್ಲಾ ಪೊಲೀಸರಿಂದ ಎಸ್.ಎಮ್.ಎಸ್ ಕುರಿತು ಜಾಗೃತಿ ಅಭಿಯಾನ

ಬಳ್ಳಾರಿ, ಆ. 13: ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಸ್ಯಾನಿಟೈಸ್ ಬಳಕೆ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದ(ಎಸ್.ಎಮ್.ಎಸ್) ಬಗ್ಗೆ ಸಾರ್ವಜನಿಕರಲ್ಲಿ ಅಭಿಯಾನದ ಮೂಲಕ ಜಾಗೃತಿ ಮೂಡಿಸಿದರು.
ಸೋಮವಾರ ಜಿಲ್ಲೆಯ ಶಾಲೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕೊವೀದ್ ಹಿಮ್ಮೆಟ್ಟಿಸುವ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಎಸ್.ಎಮ್.ಎಸ್ ಅಭ್ಯಾಸ ಅಳವಡಿಸಿ ಕೊಳ್ಳಬೇಕೆಂದು ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.
ಬೆಳಿಗ್ಗೆ 10 ರಿಂದ 1130 ರವರೆಗೆ ಜಾಗೃತಿ‌ ಅಭಿಯಾನದ
ಭಾಗವಾಗಿ ಮಾಸ್ಕ್ ಧರಿಸದ ಸಾರ್ವಜನಿಕರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಸೈದುಲ್ಲಾ ಅಡಾವತ್ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ 590 ಪ್ರಕರಣಗಳು ದಾಖಲಾಗಿಸಿ 77000 ರೂ. ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಜಾಗೃತಿ ಅಭಿಯಾನದಲ್ಲಿ ಜಿಲ್ಲೆಯ ಡಿವೈಎಸ್ಪಿ, ಸಿಪಿಐ ಮತ್ತು ಪಿಎಸ್ಐಗಳು ಭಾಗವಹಿಸಿದ್ದರು.
*****