ಎಂಎಲ್ಸಿ ಚುನಾವಣೆ: ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ನಾಳೆ ಮತ ಎಣಿಕೆ

ಬಳ್ಳಾರಿ, ಡಿ.13: ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ‌ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ (ಡಿ.14)ನಡೆಯಲಿದೆ.
ಮತ ಎಣಿಕೆಯ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಅಪರ‌ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಸೋಮವಾರ ಪರಿಶೀಲನೆ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಮಾಜಿ ಸಂಸದ, ವಿಧಾನ‌ ಪರಿಷತ್ ಸದಸ್ಯ ಕೆ.ಸಿ‌. ಕೊಂಡಯ್ಯ ಮತ್ತು ಬಿಜೆಪಿಯ ವೈ.ಎಂ. ಸತೀಶ ಅವರ ಮಧ್ಯೆ ನೇರ ಪೈಪೋಟಿ ಇದ್ದು ವಿಜಯ ಮಾಲೆ ಯಾರ ಕೊರಳಿಗೆ ಬೀಳುವುದೋ‌ ಕಾದು‌ ನೋಡಬೇಕಿದೆ.        ಎರಡು ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಯೇ ಗೆಲ್ಲುವುದು ಎಂದು‌ ಹೇಳುತ್ತಿದ್ದಾರೆ. ಶಾಸಕ‌‌ ಬಿ.ನಾಗೇಂದ್ರ ಅವರು ಕೆ.‌ಸಿ‌ಕೊಂಡಯ್ಯ ಅವರು ಎಂಟನೂರು ಮತಗಳಿಂದ‌ ಗೆಲುವು‌ ಸಾಧಿಸಲಿದ್ದಾರೆ ಎಂದರೆ,  ಬಿಜೆಪಿ ಶಾಸಕ ಜಿ.ಸೋಮಶೇಖರ‌ರೆಡ್ಡಿ ಅವರು ಸತೀಶ್ ಅವರೇ ವಿಜಯಮಾಲೆ‌ ಧರಿಸುತ್ತಾರೆ ಎಂದು‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಪಕ್ಷೇತರರಾಗಿ ಬಳ್ಳಾರಿ‌ ನಗರ ಸಭೆಯ ಮಾಜಿ‌ ಸದಸ್ಯ ಗಂಗೀರೆಡ್ಡಿ ಮತ್ತು ಮಂಜುನಾಥ್ ಅವರು‌ ಚುನಾವಣೆ ಎದುರಿಸಿದ್ದಾರೆ.
*****