ಅನುದಿನ ಕವನ-೩೫೪, ಕವಿ: ಯಮಹ (ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ), ಕವನದ ಶೀರ್ಷಿಕೆ: ಮನಹ ಚುಟುಕುಗಳು

ಮನಹ ಚುಟುಕುಗಳು.

ಗಾಂಧಿಗೆ.
ನಿನ್ನಲ್ಲಿರುವ ಕೋಲು
ಆಗಿದ್ದರೆ ಬಾರುಕೋಲು,
ದೇಶ ಆಗುತ್ತಿರಲಿಲ್ಲ
ಪಾಲು…..

ಸಿಕ್ಕಿದ್ದೇನು.

ಗೆಳತಿ ಸಿಗುವದೆಂದು
ಹುಡುಕಿದೆ, ನಿನ್ನ
ಕೇಶರಾಶಿಯಲ್ಲಿ
ಪ್ರೀತಿಯ ಜೇನು.
ಆದರೆ ಸಿಕ್ಕಿದ್ದು
ಕೈತುಂಬ ಹೇನು….

ಜೋರು.

ನಮ್ಮತ್ತೆ ನಮ್ಮಾವ
ಬಂದರೆ ನಮ್ಮ ಮನೆಯಲ್ಲಿ
ಅಡುಗೆ ಬಲು ಜೋರು.
ಅದೆ ನನ್ನವಳ ಮಾವ
ಅತ್ತೆ ಬಂದರೆ
ಅನ್ನ ಸಾರು….

ನಿಷೇದಾಗ…

ನಮ್ಮೂರಾಗ ಆಗೇತಿ
ಪಾನ ನಿಷೇಧ.
ಆದರೂ ನಮ್ಮೂರ
ಜನ ಇರ್ತಾರ.
ಯಾವಾಗಲೂ ನಿಶೇದಾಗ…

-ಯಮಹ (ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ)
*****