ಅನುದಿನ ಕವನ-೩೬೧, ಕವಿ: ಶ್ರೀಕಾಂತ ಮಳೆಗಲ್, ಬಳ್ಳಾರಿ, ಕವನದ ಶೀರ್ಷಿಕೆ: ಕತ್ತಲೆಯ ನಡುವಲಿ

ಕತ್ತಲೆಯ ನಡುವಲಿ

ನಿನ್ನಯ ನೆನಪು ; ನನಗೆ
ಹೂ ಮಳೆಯಾಗಿದೆ ; ಕನವರಿಕೆಯು ಮನವರಿಕೆಯಾಗಿದೆ ಅಹೋಬಲವಾಗಿ
ಮಧುರವಾದ ನಿನ್ನ ಬಯಕೆಯನ್ನು
ಒಡಲಾಳದ ಮಮತೆಯ ಬದಿಗೆ ನಿನ್ನ ಬರುವಿಕೆ
ಸೂಕ್ಷ್ಮ ವಹಿಸಿದೆ ಹಾಗೆ ಸುಮ್ಮನೆ.

ಕಣ್ಮನದ ಸರಸ ಸಲ್ಲಾಪ ಮಾತ್ರ ನಿನ್ನೊಂದಿಗೆ
ಅದು ಸಂಗೀತದಷ್ಟೇ ಅಮರ ಧ್ಯಾನ
ಮಾತುಬರದವನಾಗಿ ಮೂಕನಾದ ನನ್ನಯ
ಪಿಸುಮಾತು ಪದೇ ಪದೇ ಸ್ವೀಕರಿಸಿದೆ ನಿನ್ನ ಕಾಲ್ಗೆಜ್ಜೆಯ ಕಂಪು

ಮೋಡದ ಮರೆಯಲಿ ; ಕಾನನದ ನಡುವಲಿ
ಅದೇನೊ ಕಚಗುಳಿ
ಪ್ರೀತಿಯ ಸವಿಗಾನ ಸದಾ ತನ್ಮಯ
ಚಿರಕಾಲದ ಸ್ನೇಹ ಬೆಳೆದಿದೆ ನನ್ನ ನಿನ್ನ ನಡುವಲಿ ಬಹುಕಾಲದ ಕೃತಿಯಾಗಿ
ಸಣ್ಣ ಸಣ್ಣ ಹುಸಿ ಕೋಪ ಬಿಡುವೆಯಾ ; ನನ್ನ ಮೇಲೆ
ಪ್ರಣತಿ.

-ಶ್ರೀಕಾಂತ ಮಳೆಗಲ್, ಬಳ್ಳಾರಿ
*****